ರಣಜಿ ಟ್ರೋಫಿ: ನಿಶ್ಚಲ್, ಶರತ್ ಶತಕ; ವಿದರ್ಭ ವಿರುದ್ಧ ರಾಜ್ಯಕ್ಕೆ ಮೇಲುಗೈ

0
Sharath BR top-scored with 47. File photo: Facebook

ನಾಗ್ಪುರ, ನವೆಂಬರ್ 14: ಆರಂಭಿಕ ಆಟಗಾರ ಡಿ.ನಿಶ್ಚಲ್ (113) ಮತ್ತು ಯುವ ವಿಕೆಟ್ ಕೀಪರ್ ಬಿ.ಆರ್ ಶರತ್ (103) ಅವರ ಅಮೋಘ ಶತಕಗಳ ನೆರವಿನಿಂದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ಹಾಲಿ ಚಾಂಪಿಯನ್ ವಿದರ್ಭ ವಿರುದ್ಧದ ರಣಜಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಇಲ್ಲಿನ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ, ವಿದರ್ಭ ವಿರುದ್ಧ 71 ರನ್ ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಈ ಮೂಲಕ ಕನಿಷ್ಠ 3 ಅಂಕಗಳನ್ನು ಖಾತ್ರಿ ಪಡಿಸಿಕೊಂಡಿತು.

Nischal D.

ವಿದರ್ಭದ 307 ರನ್ ಗಳಿಗೆ ಉತ್ತರವಾಗಿ 5 ವಿಕೆಟ್ ಗೆ 208 ರನ್ಗಳಿಂದ 3ನೇ ದಿನದಾಟ ಮುಂದುವರಿಸಿದ ಕರ್ನಾಟಕ, ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 378 ರನ್ಗಳಿಗೆ ಆಲೌಟಾಯಿತು. 66 ರನ್ ಗಳಿಸಿ ಅಜೇಯರಾಗುಳಿದಿದ್ದ ನಿಶ್ಚಲ್ ಹಾಗೂ 46 ರನ್ಗಳಿಂದ ಆಟ ಮುಂದುವರಿಸಿದ ಶರತ್ 3ನೇ ದಿನ ಶತಕ ಬಾರಿಸಿದರು. ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ನಿಶ್ಚಲ್ 338 ಎಸೆತಗಳಲ್ಲಿ 113 ರನ್ ಗಳಿಸಿ ರಣಜಿ ವೃತ್ತಿಜೀವನದ 2ನೇ ಶತಕ ಗಳಿಸಿದರೆ, 161 ಎಸೆತಗಳಲ್ಲಿ 20 ಬೌಂಡರಿಗಳ ನೆರವಿನಿಂದ 103 ರನ್ ಕಲೆ ಹಾಕಿದ ಶರತ್, ತಮ್ಮ ಪದಾರ್ಪಣೆಯ ರಣಜಿ ಪಂದ್ಯದಲ್ಲೇ ಶತಕ ಸಾಧನೆ ಮಾಡಿದರು. ನಿಶ್ಚಲ್ ಮತ್ತು ಶರತ್ ಜೋಡಿ 6ನೇ ವಿಕೆಟ್ಗೆ ಅಮೋಘ 160 ರನ್ ಸೇರಿಸಿ ಕರ್ನಾಟಕ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಮಹತ್ವದ ಪಾತ್ರ ನಿಭಾಯಿಸಿತು.

ನಂತರ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ವಿದರ್ಭ 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದ್ದು, ಪಂದ್ಯ ಡ್ರಾದತ್ತ ಸಾಗಿದೆ.

Brief scores: Vidarbha: I innings 307 and (II innings): 72/2 in 28 overs (Faiz Fazal 14, Sanjay Ramaswamy 13, Wasim Jaffer 21 batting, Ganesh Satish 24 batting; J Suchit 1/18) vs Karnataka (I innings): 378 all out in 134 overs (D Nischal 113, BR Sharat 103, R Vinay Kumar 39 not out, J Suchit 20; Aditya Sarvate 5/91, Akshay Wakhare 2/93, Sanjay Ramaswamy 2/23).

LEAVE A REPLY

Please enter your comment!
Please enter your name here

thirteen − 5 =