ರಣಜಿ ಟ್ರೋಫಿ: ನಿಶ್ಚಲ್, ಶರತ್ ಭರ್ಜರಿ ಶತಕ; ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ

0

ನಾಗ್ಪುರ, ನವೆಂಬರ್ 14: ಯುವ ಆಟಗಾರರಾದ ಡಿ.ನಿಶ್ಚಲ್ ಮತ್ತು ಶರತ್ ಬಿ.ಆರ್ ಬಾರಿಸಿದ ಅಮೋಘ ಶತಕಗಳ ನೆರವಿನಿಂದ ಕರ್ನಾಟಕ ತಂಡ, ವಿದರ್ಭ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಸಂಪಾದಿಸಿದೆ.
ಇಲ್ಲಿನ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ಪಂದ್ಯದ 3ನೇ ದಿನ ನಿಶ್ಚಲ್ ಮತ್ತು ಶರತ್ ಭರ್ಜರಿ ಶತಕಗಳನ್ನು ಸಿಡಿಸಿದರು. 2ನೇ ದಿನದಂತ್ಯಕ್ಕೆ 66 ರನ್ ಗಳಿಸಿದ್ದ ನಿಶ್ಚಲ್, ರಣಜಿ ವೃತ್ತಿಜೀವನದ 2ನೇ ಶತಕ ಬಾರಿಸಿದರೆ, ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ವಿಕೆಟ್ ಕೀಪರ್ ಶರತ್ ಚೊಚ್ಚಲ ಶತಕ ಗಳಿಸಿದರು.
ದ್ವಿತೀಯ ದಿನದಂತ್ಯಕ್ಕೆ 46 ರನ್ ಗಳಿಸಿದ್ದ ಶರತ್ 20 ಬೌಂಡರಿಗಳ ನೆರವಿನಿಂದ 159 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಕರ್ನಾಟಕ ತಂಡ 149 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ್ದ ನಿಶ್ಚಲ್ ಮತ್ತು ಶರತ್ ಅಮೋಘ ಜೊತೆಯಾಟದ ಮೂಲಕ ತಂಡಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here

eight − 5 =