ರಣಜಿ ಟ್ರೋಫಿ: ಬ್ಯಾಟಿಂಗ್ ವೈಫಲ್ಯ, ಕರ್ನಾಟಕಕ್ಕೆ ಇನ್ನಿಂಗ್ಸ್ ಹಿನ್ನಡೆ

0

ರಾಜ್ ಕೋಟ್, ಡಿಸೆಂಬರ್ 7: ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕರ್ನಾಟಕ ತಂಡ, ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ 99 ರನ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ಕರ್ನಾಟಕ ತಂಡ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 217  ರನ್ ಗಳಿಗೆ ಆಲೌಟಾಯಿತು. ಕರ್ನಾಟಕದ ಬ್ಯಾಟಿಂಗ್ ಸರದಿಯಲ್ಲಿ ಡಿ.ನಿಶ್ಚಲ್(58) ಮತ್ತು ಕರುಣ್ ನಾಯರ್ (63) ಮಾತ್ರ ಸೌರಾಷ್ಟ್ರ ದಾಳಿಗೆ ಸಡ್ಡು ಹೊಡೆದು ಜವಾಬ್ದಾರಿ ಪ್ರದರ್ಶಿಸಿದರು. ಉಳಿದಂತೆ ಆರ್.ಸಮರ್ಥ್(15), ದೇವದತ್ ಪಡಿಕಲ್(3), ಪವನ್ ದೇಶಪಾಂಡೆ(27), ವಿಕೆಟ್ ಕೀಪರ್ ಬಿ.ಆರ್ ಶರತ್(4) ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ಮುಂಬೈ ವಿರುದ್ಧ ಶತಕ ಬಾರಿಸಿದ್ದ ಕೆ.ವಿ ಸಿದ್ಧಾರ್ಥ್(6) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. 

25 ರನ್ ಗಳಿಸುವಷ್ಟರಲ್ಲಿ ಸಮರ್ಥ್ ಹಾಗೂ ದೇವದತ್ ಪಡಿಕಲ್ ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ನಿಶ್ಚಲ್ ಮತ್ತು ಕರುಣ್ ನಾಯರ್ 3ನೇ ವಿಕೆಟ್ ಗೆ 96 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು.

ಆದರೆ ಉತ್ತಮ ಲಯದಲ್ಲಿದ್ದ ಕರುಣ್ ನಾಯರ್ 83 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿದ್ದಾಗ ಕಮಲೇಶ್ ಮಕ್ವಾನ ಎಸೆತದಲ್ಲಿ ಕ್ಲೀನ್ ಬೌಲ್ಡಾದರು. ಕರುಣ್ ಔಟಾಗುತ್ತಲೇ ಕರ್ನಾಟಕದ ಕುಸಿತ ಆರಂಭವಾಯಿತು. ಸೌರಾಷ್ಟ್ರ ಪರ ಎಡಗೈ ಸ್ಪಿನ್ನರ್ ಧರ್ಮೇಂದ್ರಸಿನ್ಹ ಜಡೇಜಾ 103 ರನ್ನಿತ್ತು 7 ವಿಕೆಟ್ ಉರುಳಿಸಿದರು.

ಇದಕ್ಕೂ ಮೊದಲು 8 ವಿಕೆಟ್ ಗೆ .. ರನ್ ಗಳಿಂದ ದಿನದಾಟ ಮುಂದುವರಿಸಿದ ಸೌರಾಷ್ಟ್ರ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 316 ರನ್ ಕಲೆ ಹಾಕಿತು. ಮೊದಲ 5 ವಿಕೆಟ್ ಗಳನ್ನು 119 ರನ್ ಗಳಿಗೆ ಕಳೆದುಕೊಂಡಿದ್ದ ಸೌರಾಷ್ಟ್ರ, ನಂತರದ 5 ವಿಕೆಟ್ ಗಳ ನೆರವಿನಿಂದ 197 ರನ್ ಕಲೆ ಹಾಕಿತು. ಕರ್ನಾಟಕ ಪರ ಎಡಗೈ ಸ್ಪಿನ್ನರ್ ಜೆ.ಸುಚಿತ್ 111 ರನ್ನಿತ್ತು 6 ವಿಕೆಟ್ ಪಡೆಯುವ ಮೂಲಕ ಪ್ರಸಕ್ತ ರಣಜಿ ಋತುವಿನಲ್ಲಿ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡರು.

Brief scores 

Saurashtra: 316 all out in 97.1 overs (Jaydev Shah 97, Kamlesh Makwana 46, Vasavada 38; J Suchit 6/111, Pavan Deshpande 3/88, Shreyas Gopal 1/66) Vs Karnataka: 217 all out in 78.1 overs (Karun Nair 63, D Nischal 58, Pavan Deshpande 27; DA Jadeja 7/103, Kamlesh Makwana 2/58). 

LEAVE A REPLY

Please enter your comment!
Please enter your name here

three × 1 =