ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಗೆಲುವಿನತ್ತ ಕರ್ನಾಟಕ

0
Shreyas Gopal. PC: Twitter

ಮೈಸೂರು, ನವೆಂಬರ್ 30: ಆತಿಥೇಯ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಎಲೈಟ್ ‘ಎ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಗೆಲುವಿಗಾಗಿ 184 ರನ್ ಗಳ ಗುರಿ ಪಡೆದಿದ್ದು, 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ. ಪಂದ್ಯದ ಅಂತಿಮ ದಿನವಾದ ಶನಿವಾರ ಕರ್ನಾಟಕ ಗೆಲ್ಲಲು 130 ರನ್ ಗಳಿಸಬೇಕಿದೆ. ಯುವ ಆರಂಭಿಕ ಬ್ಯಾಟ್ಸ್ ಮನ್ ಗಳಾದ ದೇವದತ್ ಪಡಿಕಲ್ (ಅಜೇಯ 33) ಮತ್ತು ಡಿ.ನಿಶ್ಚಲ್ (ಅಜೇಯ 21) ಮುರಿಯದ ಮೊದಲ ವಿಕೆಟ್ ಗೆ 54 ರನ್ ಸೇರಿಸಿದ್ದು, 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು 3 ವಿಕೆಟ್ ಗೆ 48 ರನ್ ಗಳಿಂದ 3ನೇ ದಿನದಾಟ ಮುಂದುವರಿಸಿದ ಮಹಾರಾಷ್ಟ್ರ ತನ್ನ 2ನೇ ಇನ್ನಿಂಗ್ಸ್ ನಲ್ಲಿ 256 ರನ್ ಕಲೆ ಹಾಕಿ ಆಲೌಟಾಯಿತು. ಶ್ರೇಯಸ್ ಗೋಪಾಲ್ ದಾಳಿಗೆ ಕುಸಿದು ಒಂದು ಹಂತದಲ್ಲಿ 113 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡ ಪ್ರವಾಸಿ ಪಡೆ ಮತ್ತೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆದರೆ ಕರ್ನಾಟಕದ ದಾಳಿಗೆ ಸಡ್ಡು ಹೊಡೆದ ರುತುರಾಜ್ ಗಾಯಕ್ವಾಡ್ (89) ಮತ್ತು ನೌಶಾದ್ ಶೇಖ್ (73) 7ನೇ ವಿಕೆಟ್ ಗೆ 106 ರನ್ ಸೇರಿಸಿದರು. ಈ ಜೊತೆಯಾಟದ ಸಂದರ್ಭದಲ್ಲಿ ಕರ್ನಾಟಕದ ಕ್ಷೇತ್ರರಕ್ಷಕರು 3 ಕ್ಯಾಚ್ ಕೈಚೆಲ್ಲಿದ್ದು ಮಹಾರಾಷ್ಟ್ರಕ್ಕೆ ವರವಾಗಿ ಪರಿಣಮಿಸಿತು. ಅಲ್ಲದೆ ವೇಗಿ ಅಭಿಮನ್ಯು ಮಿಥುನ್ ಗಾಯಕ್ಕೊಳಗಾಗಿ ಮೈದಾನ ತೊರೆದದ್ದು ಕರ್ನಾಟಕ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.
ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೊತೆಯಾಟವನ್ನು ಕೊನೆಗೂ ಬೇರ್ಪಡಿಸುವಲ್ಲಿ ನಾಯಕ ಆರ್.ವಿನಯ್ ಕುಮಾರ್ ಯಶಸ್ವಿಯಾದರು. ಶತಕದತ್ತ ಮುನ್ನಡೆದಿದ್ದ ರುತುರಾಜ್ ಗಾಯಕ್ವಾಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ವಿನಯ್, ಕರ್ನಾಟಕದ ಮುಂದಿದ್ದ ದೊಡ್ಡ ಅಡೆತಡೆಯನ್ನು ಪಕ್ಕಕ್ಕೆ ಸರಿಸಿದರು. ಮೊದಲ 6 ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡ ಮಹಾರಾಷ್ಟ್ರ ತಂಡ ಕೊನೆಯ 4 ವಿಕೆಟ್ ಗಳ ನೆರವಿನಿಂದ 143 ರನ್ ಕಲೆ ಹಾಕಿ ಕರ್ನಾಟಕಕ್ಕೆ ಸಡ್ಡು ಹೊಡೆಯಿತು.

Brief scores (Day 3): Maharashtra (I innings): 113 & II innings (o/n 48/3): 256 all out in 97 overs (Ruturaj Gaikwad 89, S. Bachhav 28, Naushad Sheikh 73, Shreyas Gopal 4/64, R. Vinay Kumar 3/41, Pawan Deshpande 2/23) vs Karnataka (I innings): 186 & (Target: 184) 54/0 in 29 overs (Devdutt Padikkal 33 batting, D. Nischal 21 batting). Karnataka need 130 runs.

LEAVE A REPLY

Please enter your comment!
Please enter your name here

2 × 4 =