ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

0

ಮೈಸೂರು, ಡಿಸೆಂಬರ್ 1: ಆತಿಥೇಯ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಥ ರಣಜಿ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊದಲ ಗೆಲುವು ಸಂಪಾದಿಸಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಶನಿವಾರ ಅಂತ್ಯಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯವನ್ನು ಗೆದ್ದು ಪೂರ್ಣ 6 ಅಂಕ ಸಂಪಾದಿಸಿದ ಕರ್ನಾಟಕ 3 ಪಂದ್ಯಗಳಿಂದ ತನ್ನ ಒಟ್ಟಾರೆ ಅಂಕ ಗಳಿಕೆಯನ್ನು 12ಕ್ಕೆ ಹೆಚ್ಚಿಸಿಕೊಂಡಿತು.

ಗೆಲುವಿಗೆ 185 ರನ್ ಗಳ ಗುರಿ ಬೆನ್ನಟ್ಟಿದ್ದ ಕರ್ನಾಟಕ 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿತ್ತು. 4ನೇ ದಿನ ಆಟ ಮುಂದುವರಿಸಿದ ಯುವ ಆರಂಭಿಕರಾದ ಡಿ.ನಿಶ್ಚಲ್ ಮತ್ತು ದೇವದತ್ ಪಡಿಕಲ್ ಮೊದಲ ವಿಕೆಟ್ ಗೆ 121 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಪದಾರ್ಪಣೆಯ ರಣಜಿ ಪಂದ್ಯವಾಡಿದ ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ ದೇವದತ್ ಪಡಿಕಲ್ 128 ಎಸೆತಗಳಲ್ಲಿ 77 ರನ್ ಔಟಾದರು. ಈ ಮೂಲಕ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ ಮೊದಲ ಅರ್ಧಶತಕ ದಾಖಲಿಸಿದರು.

ಮತ್ತೊಂದೆಡೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ನಿಶ್ಚಲ್ 212 ಎಸೆತಗಳಲ್ಲಿ 61 ರನ್ ಗಳಿಸಿದರು. ಅಂತಿಮವಾಗಿ 3 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಪ್ರಸಕ್ತ ಸಾಲಿನಲ್ಲಿ ಮೊದಲ ಜಯದ ಸಂಭ್ರಮ ತನ್ನದಾಗಿಸಿಕೊಂಡಿತು.

ಕರ್ನಾಟಕ ತಂಡದ ನಾಯಕ ಆರ್.ವಿನಯ್ ಕುಮಾರ್ ಈ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಪಡೆಯುವ ಮೂಲಕ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 450 ವಿಕೆಟ್ ಪೂರ್ತಿಗೊಳಿಸಿದರು. ಡಿಸೆಂಬರ್ 6ರಂದು ರಾಜ್ ಕೋಟ್ ನಲ್ಲಿ ಆರಂಭವಾಗಲಿರುವ ತನ್ನ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

Brief scores

Maharashtra: 113 & 256 all out in 97 overs (Ruturaj Gayakwad 89; Naushad Shaikh 73; Shreyas Gopal 4/64, R Vinay Kumar 3/41) lost to Karnataka: 186 & 184/3 in (Devdutt Padikkal 77, D Nischal 61, Mir Kaunian Abbas 34 not out) by 7 wickets.

LEAVE A REPLY

Please enter your comment!
Please enter your name here

five + 17 =