ರಣಜಿ ಟ್ರೋಫಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಮೊದಲ ದಿನವೇ ಮೇಲುಗೈ

0
PC: Facebook

ಮೈಸೂರು, ನವೆಂಬರ್ 28: ಬೌಲರ್ ಗಳು ತೋರಿದ ಅಮೋಘ ಪ್ರದರ್ಶನದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ರಣಜಿ ಟ್ರೋಫಿ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮೊದಲ ದಿನವೇ ಮೇಲುಗೈ ಸಾಧಿಸಿದೆ.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಮಹಾರಾಷ್ಟ್ರ ಬ್ಯಾಟಿಂಗ್ ಆಯ್ದುಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಚಿರಾಗ್ ಖುರಾನಾ (0) ಅವರನ್ನು ಮೊದಲ ಓವರ್ ನಲ್ಲೇ ಪೆವಿಲಿಯನ್ ಗಟ್ಟಿದ ನಾಯಕ ಆರ್.ವಿನಯ್ ಕುಮಾರ್ ಕರ್ನಾಟಕಕ್ಕೆ ಉತ್ತಮ ಆರಂಭ ಒದಗಿಸಿದರು. ಬೆನ್ನು ನೋವಿನ ಕಾರಣ ಕಳೆದ ಮುಂಬೈ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ವಿನಯ್, ತಾವು ಫಿಟ್ ಆಗಿರುವುದನ್ನು ಈ ಮೂಲಕ ಸಾಬೀತು ಪಡಿಸಿದರು. ತನ್ನ ಮೊತ್ತ 49 ರನ್ ಗಳಾಗುವಷ್ಟರಲ್ಲಿ ಮಹಾರಾಷ್ಟ್ರ ತಂಡ 5 ವಿಕೆಟ್ ಕಳೆದುಕೊಂಡಿತು. ಮತ್ತೊಂಬ್ಬ ಓಪನರ್ ಸ್ವಪ್ನಿಲ್ ಗುಗಾಲೆ (1) ಪೀಣ್ಯ ಎಕ್ಸ್ ಪ್ರೆಸ್ ಅಭಿಮನ್ಯು ಮಿಥುನ್ ದಾಳಿಯಲ್ಲಿ ಔಟಾದರೆ, ನಾಯಕ ರಾಹುಲ್ ತ್ರಿಪಾಠಿ (0) ಅವರನ್ನು ವೇಗಿ ರೋನಿತ್ ಮೋರೆ ಶೂನ್ಯಕ್ಕೆ ಪೆವಿಲಿಯನ್ ಗೆ ಅಟ್ಟಿದರು. ಮಹಾರಾಷ್ಟ್ರದ ಕೆಳಕ್ರಮಾಂಕದ ಆಟಗಾರರನ್ನು ತ್ವರಿತಗತಿಯಲ್ಲಿ ಔಟ್ ಮಾಡಿದ ಎಡಗೈ ಸ್ಪಿನ್ನರ್ ಜೆ.ಸುಚಿತ್ (4/26) ನಾಲ್ಕು ವಿಕೆಟ್ ಗಳನ್ನು ಉರುಳಿಸಿದರು. ಅದರಲ್ಲೂ ರುತುರಾಜ್ ಗಾಯಕ್ವಾಡ್ (39) ಹಾಗೂ ನಿಕಿತ್ ಧುಮಾಲ್ (0) ಅವರನ್ನು ಸ್ಥಳೀಯ ಹುಡುಗ ಸುಚಿತ್ ಸತತ 2 ಎಸೆತಗಳನ್ನು ಔಟ್ ಮಾಡಿದರು. ಕರ್ನಾಟಕದ ಬೌಲರ್ ಗಳ ಸಂಘಟಿತ ದಾಳಿಗೆ ತತ್ತರಿಸಿದ ಮಹಾರಾಷ್ಟ್ರ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ 113 ರನ್ ಗಳಿಗೆ ಆಲೌಟಾಯಿತು.

ನಂತರ ತನ್ನ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಯುವ ಎಡಗೈ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ಅವರನ್ನು ಬೇಗನೆ ಕಳೆದುಕೊಂಡಿತು. ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಪಡಿಕಲ್ ತಮ್ಮ ಚೊಚ್ಚಲ ಇನ್ನಿಂಗ್ಸ್ ನಲ್ಲಿ ಕೇವಲ 7 ರನ್ ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ಮಿರ್ ಕೌನೇನ್ ಅಬ್ಬಾಸ್ (15) ಮತ್ತು 4ನೇ ಕ್ರಮಾಂಕದಲ್ಲಿ ಆಡಲಿಳಿದ ಕಳೆದ ಮುಂಬೈ ವಿರುದ್ಧದ ಪಂದ್ಯದ ಶತಕವೀರ ಕೆ.ವಿ ಸಿದ್ಧಾರ್ಥ್ (11) ಈ ಬಾರಿ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದರು. ಆದರೆ ಮತ್ತೊಂದು ತುದಿಯಲ್ಲಿ ಆರಂಭಿಕ ಆಟಗಾರ ಡಿ.ನಿಶ್ಚಲ್ (ಅಜೇಯ 32) ಜವಾಬ್ದಾರಿಯುತ ಆಟ ಪ್ರದರ್ಶಿಸಿ ಕುಸಿತವನ್ನು ತಡೆದರು.

ಮೊದಲ ದಿನದಂತ್ಯಕ್ಕೆ ಕರ್ನಾಟಕ ತಂಡ 3 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದ್ದು, ಇನ್ನಿಂಗ್ಸ್ ಮುನ್ನಡೆ ಪಡೆಯಲು ಇನ್ನು ಕೇವಲ 44 ರನ್ ಗಳಿಸಬೇಕಿದೆ. ನಿಶ್ಚಲ್ ಅವರೊಂದಿಗೆ ಸುಚಿತ್ (ಅಜೇಯ 2) 2ನೇ ದಿನ ಆಟ ಮುಂದುವರಿಸಲಿದ್ದಾರೆ.

Brief scores (Day 1): Maharashtra (I innings): 113 all out in 39.4 overs (Ruturaj Gaikwad 39, R Motwani 34, J. Suchith 4/26, Ronit More 2/16, A. Mithun 2/42, Vinay Kumar 2/19) vs Karnataka (I innings)L 70/3 in 40 overs (D. Nischal 32 batting, J. Suchith 7 batting). Trail by 43 runs.

LEAVE A REPLY

Please enter your comment!
Please enter your name here

two + eleven =