ರಣಜಿ ಟ್ರೋಫಿ: ಮುಂಬೈ ವಿರುದ್ಧ ಡ್ರಾಗೆ ತೃಪ್ತಿ ಪಟ್ಟ ಕರ್ನಾಟಕ

0
PC: Facebook

ಬೆಳಗಾವಿ, ನವೆಂಬರ್ 23: ಎಂಟು ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ, 41 ಬಾರಿಯ ಚಾಂಪಿಯನ್ಸ್ ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟು ಕೇವಲ 3 ಅಂಕಗಳಿಗಷ್ಟೇ ಸಮಾಧಾನಪಟ್ಟುಕೊಂಡಿದೆ.

ಕೆಎಸ್ ಸಿಎ ಮೈದಾನದಲ್ಲಿ ಶುಕ್ರವಾರ ಅಂತ್ಯಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲ್ಲುವ ಅವಕಾಶಗಳಿದ್ದವು. ಆದರೆ ಮುಂಬೈ ಬ್ಯಾಟ್ಸ್ ಮನ್ ಗಳು ದ್ವಿತೀಯ ಇನ್ನಿಂಗ್ಸ್ ನಲ್ಲಿ ತೋರಿದ ಪ್ರತಿರೋಧದಿಂದಾಗಿ ಗೆಲುವು ಕೈತಪ್ಪಿತು. ಅಂತಿಮ ದಿನ 3 ವಿಕೆಟ್ ಗೆ 81 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ ತನ್ನ 2ನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 170 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಪ್ರಥಮ ಇನ್ನಿಂಗ್ಸ್ ನ ಶತಕವೀರ ಕೆ.ವಿ ಸಿದ್ದಾರ್ಥ್ ಅಜೇಯ 71 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ ಗಳ ದೊಡ್ಡ ಮುನ್ನಡೆ ಪಡೆದಿದ್ದ ಕರ್ನಾಟಕ, ಈ ಮೂಲಕ ಮುಂಬೈ ಗೆಲುವಿಗೆ 365 ರನ್ ಗಳ ಕಠಿಣ ಗುರಿ ನಿಗದಿ ಪಡಿಸಿತು.

ಗುರಿ ಬೆನ್ನಟ್ಟಿದ ಮುಂಬೈ 4 ವಿಕೆಟ್ ಗೆ 173 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಲಾಯಿತು.

ನವೆಂಬರ್ 28ರಂದು ಮೈಸೂರಿನಲ್ಲಿ ಆ0ಭವಾಗಲಿರುವ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

Brief scores: Karnataka (I innings): 400 & II innings (O/n 81/3): 170/5 decl. in 51 overs (KV Siddharth 71 not out, Stuart Binny 30) vs Mumbai (I innings): 205 & II innings: 173/4 in 64 overs (Akhil Herwadkar 53, Suryakumar Yadav 53, Aditya Tare 29 not out, Abhimanyu Mithun 2/22).

Points: Karnataka 3, Mumbai 2.

LEAVE A REPLY

Please enter your comment!
Please enter your name here

seven − three =