ರಣಜಿ ಟ್ರೋಫಿ: ವಿದರ್ಭ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಕರ್ನಾಟಕ

0
PC: Facebook

ನಾಗ್ಪುರ, ನವೆಂಬರ್ 15: ಗೆಲುವಿನ ಅವಕಾಶವನ್ನು ಕೈಚೆಲ್ಲಿದ ಕರ್ನಾಟಕ ತಂಡ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ವಿದರ್ಭ ವಿರುದ್ಧ ಡ್ರಾಗೆ ತೃಪ್ತಿ ಪಟ್ಟಿದೆ. ಈ ಮೂಲಕ ಪೂರ್ಣ ಆರು ಅಂಕ ಗಳಿಸುವ ಅವಕಾಶದಿಂದ ವಂಚಿತವಾಗಿ 3 ಅಂಕಗಳಿಗಷ್ಟೇ ಕರ್ನಾಟಕ ತಂಡ ಸಮಾಧನ ಪಟ್ಟುಕೊಂಡಿದೆ.

ಇಲ್ಲಿನ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ಗುರುವಾರ ಅಂತ್ಯಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವು ಕೈತಪ್ಪಿತು. ಗೆಲ್ಲಲು 157 ರನ್ಗಳ ಗುರಿ ಪಡೆದ ಕರ್ನಾಟಕ ಆತುರ ಪಟ್ಟು ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಹೀಗಾಗಿ ಕೊನೆಯಲ್ಲಿ ಗೆಲುವಿನ ಆಸೆ ಕೈಬಿಟ್ಟು ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಂದ್ಯ ಡ್ರಾಗೊಂಡಾಗ ವಿನಯ್ ಕುಮಾರ್ ಬಳಗ 6 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು.

ಇದಕ್ಕೂ ಮೊದಲು ವಿದರ್ಭ ತಂಡ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 228 ರನ್ಗಳಿಗೆ ಆಲೌಟಾಯಿತು. ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಗಣೇಶ್ ಸತೀಶ್ 79 ರನ್ ಗಳಿಸಿದರೆ, ಕರ್ನಾಟಕ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಎಡಗೈ ಸ್ಪಿನ್ನರ್ ಜೆ.ಸುಚಿತ್ (5/70) 5 ವಿಕೆಟ್ ಉರುಳಿಸಿ ಪಂದ್ಯದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 9ಕ್ಕೆ ಏರಿಸಿಕೊಂಡರು. ಪ್ರಥಮ ಇನ್ನಿಂಗ್ಸ್ ನಲ್ಲಿ ಸುಚಿತ್ (4/33) 4 ವಿಕೆಟ್ ಕಬಳಿಸಿದ್ದರು.

ನವೆಂಬರ್ 20ರಂದು ಬೆಳಗಾವಿಯ KSCA ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಮುಂಬೈ ತಂಡವನ್ನುಎದುರಿಸಲಿದೆ.

Brief scores: Vidarbha: I innings 307 and (II innings, O/n 72/2):  228 all out in 86.1 overs (Ganesh Satish 79 (164b, 10×4), Apoorv Wankhade 51 (75b, 7×4), Suchith J. 5/70, Prasidh Krishna 3/58) drew with Karnataka I innings: 378 & II innings: (II innings): 76/6 in 33 overs (R. Samarth 30, Aditya Sarwate 4/24, Lalit Yadav 2/12).

LEAVE A REPLY

Please enter your comment!
Please enter your name here

four × three =