ರಣಜಿ ಟ್ರೋಫಿ: ವಿದಾಯದ ಪಂದ್ಯದಲ್ಲಿ ಗಂಭೀರ್ ಅಮೋಘ ಶತಕ

0

ಹೊಸದಿಲ್ಲಿ, ಡಿಸೆಂಬರ್ 8: ದಿಲ್ಲಿ ತಂಡದ ಅನುಭವಿ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ತಮ್ಮ ವಿದಾಯದ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿದ್ದಾರೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಆಂಧ್ರ ವಿರುದ್ಧದ ಪಂದ್ಯ ಗಂಭೀರ್ ಅವರಿಗೆ ಕೊನೆಯ ಪಂದ್ಯವಾಗಿದೆ. ಈ ಪಂದ್ಯದ ನಂತರ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿಯಾಗಲಿದ್ದಾರೆ.

ವಿದಾಯದ ಪಂದ್ಯದ 3ನೇ ದಿನ ಗಂಭೀರ್ ಆಕರ್ಷಕ ಶತಕ ಬಾರಿಸಿ ನಿವೃತ್ತಿಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ತವರು ಮೈದಾನದಲ್ಲಿ ಶತಕ ಬಾರಿಸಿ ವಿದಾಯ ಹೇಳುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಇದು ಪ್ರಥಮದರ್ಜೆ ಕ್ರಿಕೆಟ್ ನಲ್ಲಿ ಗಂಭೀರ್ ಗಳಿಸಿದ 43ನೇ ಶತಕ.

37 ವರ್ಷದ ಗಂಭೀರ್ ಭಾರತ ಪರ 58 ಟೆಸ್ಟ್ ಪಂದ್ಯಗಳನ್ನಾಡಿದ್ದು, 9 ಶತಕಗಳ ಸಹಿತ 4154 ರನ್ ಗಳಿಸಿದ್ದಾರೆ. 147 ಏಕದಿನ ಪಂದ್ಯಗಳಿಂದ 11 ಶತಕ ಸಹಿತ 5238 ರನ್ ಹಾಗೂ 37 ಟಿ ಪಂದ್ಯಗಳಿಂದ 932 ರನ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

three + 19 =