ರಣಜಿ ಟ್ರೋಫಿ: ಸಿದ್ಧಾರ್ಥ್ 166, ಕರ್ನಾಟಕ 400, ಮುಂಬೈ 99/2

0

ಬೆಳಗಾವಿ, ನವೆಂಬರ್ 21: ಕೆ.ವಿ ಸಿದ್ದಾರ್ಥ್ (166) ಅವರ ಅಮೋಘ ಶತಕದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ, ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.

ಇಲ್ಲಿನ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ಪಂದ್ಯದ 2ನೇ ದಿನ ಕರ್ನಾಟಕ ತಂಡದ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 400 ರನ್ನಿಗೆ ಆಲೌಟಾಯಿತು. 4 ವಿಕೆಟ್ ಗೆ 263 ರನ್ ಗಳಿಂದ ದಿನದಾಟ ಆರಂಭಿಸಿದ ಕರ್ನಾಟಕಕ್ಕೆ ಶತಕವೀರ ಕೆ.ವಿ ಸಿದ್ದಾರ್ಥ್ 2ನೇ ದಿನವೂ ಆಸರೆಯಾದರು. 104 ರನ್ ಗಳಿಂದ ಆಟ ಮುಂದುವರಿಸಿದ ಸಿದ್ದಾರ್ಥ್ 7ನೇ ವಿಕೆಟ್ಗೆ ಜೆ.ಸುಚಿತ್ (30) ಜೊತೆ 84 ರನ್ ಸೇರಿಸಿ ತಂಡವನ್ನು ಆಧರಿಸಿದರು. ತಮ್ಮ 2ನೇ ರಣಜಿ ಪಂದ್ಯವಾಡುತ್ತಿರುವ ಸಿದ್ದಾರ್ಥ್ ಪ್ರಥಮದರ್ಜೆ ಕ್ರಿಕೆಟ್ ನಲ್ಲಿ ಹೆಚ್ಚೇನೂ ಅನುಭವ ಇಲ್ಲದಿದ್ದರೂ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. 8ನೇ ವಿಕೆಟ್ ರೂಪದಲ್ಲಿ ಔಟಾದ ಸಿದ್ದಾರ್ಥ್ 299 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್ಸ್ ನೆರವಿನಿಂದ ಆಕರ್ಷಕ 161 ರನ್ ಗಳಿಸಿದರು. ಕೊನೆಯಲ್ಲಿ ಬಿರುಸಿನ ಆಟವಾಡಿದ ಅಭಿಮನ್ಯು ಮಿಥುನ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 34 ರನ್ ಗಳಿಸಿ ತಂಡದ ಮೊತ್ತವನ್ನು 400ರ ಗಡಿ ಮುಟ್ಟಿಸಿದರು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡ 2ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ ಮನ್ ಜೇ ಬಿಶ್ಟಾ ಅಜೇಯ 69 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕ ಪರ ವೇಗಿಗಳಾದ ಅಭಿಮನ್ಯು ಮಿಥುನ್ (1/22) ಮತ್ತು ರೋನಿತ್ ಮೋರೆ (1/22) ತಲಾ ಒಂದು ವಿಕೆಟ್ ಉರುಳಿಸಿದರು.

Brief scores: Karnataka: 400 all out in 129.4 overs (KV Siddharth 161, Mir Kaunain Abbas 64, Abhimanyu Mithun 34, J Suchit 30; Shivam Dubey 7/53, Dhawal Kulkarni 2/54) Vs Mumbai: 99/2 in 36.5 overs (Jay Bista 69 not out, Ashay Sardesai 23 not out; Abhimanyu Mithun 2/22, Ronit More 2/22).

LEAVE A REPLY

Please enter your comment!
Please enter your name here

2 × four =