ರಣಜಿ ಟ್ರೋಫಿ: 2ನೇ ದಿನವೂ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಬಿಗಿ ಹಿಡಿತ

0
PC: Shreyas Gopal/Facebook

ಮೈಸೂರು, ನವೆಂಬರ್ 29: ಬೌಲರ್ ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗುತ್ತಿರುವ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 2ನೇ ದಿನವೂ ಮೇಲುಗೈ ಸಾಧಿಸಿದೆ. ಪ್ರಥಮ ಇನ್ನಿಂಗ್ಸ್ ನಲ್ಲಿ 73 ರನ್ ಗಳ ಅಮೂಲ್ಯ ಮುನ್ನಡೆ ಪಡೆದಿರುವ ಕರ್ನಾಟಕ ತಂಡ, ದ್ವಿತೀಯ ಇನ್ನಿಂಗ್ಸ್ ನಲ್ಲೂ ಪ್ರವಾಸಿ ಪಡೆಗೆ ಆಘಾತ ನೀಡಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ಪಂದ್ಯದ ದ್ವಿತೀಯ ದಿನವೂ ಕರ್ನಾಟಕ ತನ್ನ ಹಿಡಿತ ಬಿಗಿಗೊಳಿಸಿತು. 3 ವಿಕೆಟ್ ನಷ್ಟಕ್ಕೆ 70 ರನ್ ಗಳಿಂದ ತನ್ನ ಪ್ರಥಮ ಇನ್ನಿಂಗ್ಸ್ ಮುಂದುವರಿಸಿದ ಕರ್ನಾಟಕ 186 ರನ್ ಗಳಿಗೆ ಆಲೌಟಾಗಿ 73 ರನ್ ಗಳ ಮುನ್ನಡೆ ಸಂಪಾದಿಸಿತು. ಪ್ರಥಮ ದಿನ 32 ರನ್ ಗಳೊಂದಿಗೆ ಅಜೇಯರಾಗುಳಿದಿದ್ದ ಆರಂಭಿಕ ಆಟಗಾರ ಡಿ.ನಿಶ್ಚಲ್ ಮತ್ತು 2 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಆಲ್ರೌಂಡರ್ ಜೆ.ಸುಚಿತ್ 2ನೇ ದಿನ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪವನ್ ದೇಶಪಾಂಡೆ (9) ಮತ್ತು ವಿಕೆಟ್ ಕೀಪರ್ ಬಿ.ಆರ್ ಶರತ್ (14) ಕೂಡ ಹೆಚ್ಚು ಹೊತ್ತ ನಿಲ್ಲದ ಪರಿಣಾಮ, ಕರ್ನಾಟಕ 109 ರನ್ ಗಳಿಗೆ 7 ವಿಕೆಟ್ ಕಳೆದುಕೊಳ್ಳುವಂತಾಯಿತು.

ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದಾಗ ಉಪನಾಯಕ ಶ್ರೇಯಸ್ ಗೋಪಾಲ್ (40) ಮತ್ತು ನಾಯಕ ಆರ್.ವಿನಯ್ ಕುಮಾರ್ (26) ತಂಡದ ರಕ್ಷಣೆಗೆ ನಿಂತರು. ಈ ಜೋಡಿ 8ನೇ ವಿಕೆಟ್ ಗೆ ಅತ್ಯಮೂಲ್ಯ 63 ರನ್ ಜೊತೆಯಾಟವಾಡಿ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿತು.

73 ರನ್ ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರ 2ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 48 ರನ್ ಗಳಿಸಿದ್ದು, ಇನ್ನೂ 25 ರನ್ ಗಳ ಹಿನ್ನಡೆಯಲ್ಲಿದೆ. ಕರ್ನಾಟಕ ಪರ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ (2/6) ಎರಡು ವಿಕೆಟ್ ಮತ್ತು ವೇಗಿ ಅಭಿಮನ್ಯು ಮಿಥುನ್ (1/19) ಒಂದು ವಿಕೆಟ್ ಉರುಳಿಸಿದ್ದಾರೆ.

Brief scores (Day 1): Maharashtra (I innings): 113 & II innings: 48/3 in 34 overs (Ruturaj Gaikwad 9 batting, S. Bachhav 4 batting, Shreyas Gopal 2/6) vs Karnataka (I innings, O/n 70/3): 186 all out (D. Nischal 39, Shreyas Gopal 40, R. Vinay Kumar 26, Anupam Sankalecha 2/42, Samad Fallah 2/35, S. Bachhav 3/43). Maharashtra trail by 25 runs.

LEAVE A REPLY

Please enter your comment!
Please enter your name here

seventeen + thirteen =