ರಣಜಿ ಟ್ರೋಫಿ 2018-19: ಕರ್ನಾಟಕದ ಸಂಭಾವ್ಯರ ತಂಡ ಪ್ರಕಟ

0

ಬೆಂಗಳೂರು,ಅಕ್ಟೋಬರ್ 11: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ತಂಡದ ಪರ ಆಡುತ್ತಿರುವ ಕೆ.ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಂಭಾವ್ಯ ತಂಡದಲ್ಲಿ ಒಟ್ಟು 29 ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
2018-19ನೇಸಾಲಿನ ರಣಜಿ ಟ್ರೋಫಿ ಟೂರ್ನಿ ನವೆಂಬರ್ 1ರಂದು ಆರಂಭವಾಗಲಿದ್ದು, ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿಗೆ ಕರ್ನಾಟಕದ ಸಂಭಾವ್ಯತಂಡ: ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಮನೀಶ್ ಪಾಂಡೆ, ಕರುಣ್ ನಾಯರ್, ಅಭಿಷೇಕ್ ರೆಡ್ಡಿ, ಡಿ.ನಿಶ್ಚಲ್, ಸಿ.ಎಂ ಗೌತಮ್, ಶರತ್ ಶ್ರೀನಿವಾಸ್, ಬಿ.ಆರ್ ಶರತ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಕೆ.ಗೌತಮ್, ಜೆ.ಸುಚಿತ್, ಪವನ್ ದೇಶಪಾಂಡೆ, ಕೌನೇನ್ ಅಬ್ಬಾಸ್, ಸಿದ್ದಾರ್ಥ್ ಕೆ.ವಿ., ಆರ್.ವಿನಯ್ಕುಮಾರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಟಿ.ಪ್ರದೀಪ್, ಎಚ್.ಎಸ್ ಶರತ್, ರೋನಿತ್ ಮೋರೆ, ಪ್ರತೀಕ್ ಜೈನ್, ವಿ.ಕೌಶಿಕ್, ಶುಭಾಂಗ್ ಹೆಗ್ಡೆ, ದೇವದತ್ ಪಡಿಕಲ್, ಕೆ.ಸಿಕಾರಿಯಪ್ಪ, ಲಿಯಾನ್ ಖಾನ್.

LEAVE A REPLY

Please enter your comment!
Please enter your name here

fifteen − five =