ರಣಜಿ: ನಾಳೆಯಿಂದ ಕರ್ನಾಟಕ Vs ಸೌರಾಷ್ಟ್ರ ಸೆಮಿಫೈನಲ್।ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

1

ಬೆಂಗಳೂರು, ಜನವರಿ 23: ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುದುರಿಸಲಿದೆ.

ಮನೀಶ್ ಪಾಂಡೆ ನಾಯಕತ್ವದ ಬಲಿಷ್ಠ ಕರ್ನಾಟಕ ತಂಡ ತವರು ನೆಲದಲ್ಲಿ ಸೆಮಿಫೈನಲ್ ಪಂದ್ಯವನ್ನಾಡುತ್ತಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರ ಬಲ ಹೊಂದಿರುವ ಸೌರಾಷ್ಟ್ರ ತಂಡ ಕರ್ನಾಟಕಕ್ಕೆ ಪ್ರಬಲ ಪೈಪೋಟಿ ಒಡ್ಡುವ ಎಲ್ಲಾ ಸಾಧ್ಯತೆಗಳಿವೆ. ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಎಲೈಟ್ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ರಾಜ್ ಕೋಟ್ ನಲ್ಲಿ ನಡೆದಿದ್ದ ಆ ಪಂದ್ಯವನ್ನು ಸೌರಾಷ್ಟ್ರ ಎರಡೂವರೆ ದಿನಗಳಲ್ಲಿ 87 ರನ್ ಗಳಿಂದ ಗೆದ್ದುಕೊಂಡಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಲಕ್ನೋದಲ್ಲಿ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಉತ್ತರ ಪ್ರದೇಶ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿದ ಸೌರಾಷ್ಟ್ರ, ಅಂತಿಮ 4ರ ಘಟ್ಟಕ್ಕೆ ಅರ್ಹತೆ ಪಡೆದಿದೆ. ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದಾಖಲೆಯ 373 ರನ್ ಗಳ ಗುರಿಯನ್ನು ಚೇಸ್ ಮಾಡಿ ಸೌರಾಷ್ಟ್ರ ಸೆಮಿಫೈನಲ್ ಪ್ರವೇಶಿಸಿದೆ. ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ.

ಪೂಜಾರ ಫ್ಯಾಕ್ಟರ್: ಕರ್ನಾಟಕಕ್ಕೆ ನಿಜಕ್ಕೂ ದೊಡ್ಡ ಸವಾಲಾಗಿರುವುದು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ. ಅಮೋಘ ಫಾರ್ಮ್ ನಲ್ಲಿರುವ ಪೂಜಾರ, ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಎಂಬುದು ವಿಶೇಷ. ರಣಜಿ ಟ್ರೋಫಿಯಲ್ಲಿ ಒಟ್ಟಾರೆ 68.01ರ ಸರಾಸರಿ ಹೊಂದಿರುವ ಪೂಜಾರ ಕರ್ನಾಟಕ ವಿರುದ್ಧ ಎರಡು ಶತಕ ಹಾಗೂ ಮೂರು ಅರ್ಧಶತಕಗಳ ಸಹಿತ 85.44ರ ಅಮೋಘ ಸರಾಸರಿ ಹೊಂದಿದ್ದಾರೆ. 2013ನೇ ಸಾಲಿನ ನಾಕೌಟ್ ಪಂದ್ಯದಲ್ಲಿ ಭರ್ಜರಿ ತ್ರಿಶತಕ (352) ಬಾರಿಸಿದ್ದ ಪೂಜಾರ, ಕರ್ನಾಟಕ ವಿರುದ್ಧ ಸೌರಾಷ್ಟ್ರ ತಂಡ ಮೇಲುಗೈ ಸಾಧಿಸಲು ಕಾರಣವಾಗಿದ್ದರು.


ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ಸೆಮಿಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದ್ದು, ಗೇಟ್ ನಂ.15ರಲ್ಲಿ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕಕ್ಕೆ 32ನೇ ಸೆಮಿಫೈನಲ್: ಎಂಟು ಬಾರಿ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕ ತಂಡ 32ನೇ ಸೆಮಿಫೈನಲ್ ಪಂದ್ಯದಲ್ಲಿ ಆಡುತ್ತಿದೆ. ಈ ಹಿಂದಿನ 31 ಸೆಮಿಫೈನಲ್ ಗಳ ಪೈಕಿ ಕರ್ನಾಟಕ 14 ಬಾರಿ ಫೈನಲ್ ಪ್ರವೇಶಿಸಿದ್ದರೆ, 17 ಬಾರಿ ಸೆಮಿಫೈನಲ್ ಪಂದ್ಯಗಳಲ್ಲಿ ಮುಗ್ಗರಿಸಿದೆ. ಸೌರಾಷ್ಟ್ರ ತಂಡ ತನ್ನ 6ನೇ ಸೆಮಿಫೈನಲ್ ಪಂದ್ಯದಲ್ಲಿ ಆಡುತ್ತಿದೆ.

ಇದುವರೆಗೆ ಬೆಂಗಳೂರು 11 ಬಾರಿ ರಣಜಿ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದು, ಈ ಪೈಕಿ ಕರ್ನಾಟಕಕ್ಕೆ 5 ಬಾರಿ ಯಶಸ್ಸು ಸಿಕ್ಕಿದೆ. 1978/79ನೇ ಸಾಲಿನ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡ ಬರೋಡ ವಿರುದ್ಧ ಗೆದ್ದಿದ್ದರೆ, ಉಳಿದ ನಾಲ್ಕು ಬಾರಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಫೈನಲ್ ತಲುಪಿದೆ.

ತಂಡಗಳು ಹೀಗಿವೆ
ಕರ್ನಾಟಕ: ಮನೀಶ್ ಪಾಂಡೆ(ನಾಯಕ), ಶ್ರೇಯಸ್ ಗೋಪಾಲ್(ಉಪನಾಯಕ), ಮಯಾಂಕ್ ಅಗರ್ವಾಲ್, ಡಿ.ನಿಶ್ಚಲ್, ಆರ್.ಸಮರ್ಥ್, ಕರುಣ್ ನಾಯರ್, ಕೆ.ವಿ ಸಿದ್ಧಾರ್ಥ್, ಆರ್.ವಿನಯ್ ಕುಮಾರ್, ಕೆ.ಗೌತಮ್, ಎಂ.ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಬಿ.ಆರ್ ಶರತ್(ವಿಕೆಟ್ ಕೀಪರ್), ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಜೆ.ಸುಚಿತ್.
ಸೌರಾಷ್ಟ್ರ: ಜೈದೇವ್ ಉನಾದ್ಕಟ್ (ನಾಯಕ), ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್, ಚೇತೇಶ್ವರ್ ಪೂಜಾರ, ಶೆಲ್ಡನ್ ಜಾಕ್ಸನ್, ಧರ್ಮೇಂದ್ರಸಿನ್ಹ ಜಡೇಜ, ಕಮಲೇಶ್ ಮಕ್ವಾನ, ಚಿರಾಗ್ ಜಾನಿ, ಶೌರ್ಯ ಶಾಂಡಿನ್ಯ, ಹಾರ್ದಿಕ್ ರಾಥೋಡ್, ಸಮರ್ಥ್ ವ್ಯಾಸ್, ಅರ್ಪಿತ್ ವಸವಾಡ.

ಅಂಕಿ ಅಂಶ ನೆರವು: ಚನ್ನಗಿರಿ ಕೇಶವಮೂರ್ತಿ (ಖ್ಯಾತ ಕ್ರಿಕೆಟ್ ಅಂಕಿ ಅಂಶತಜ್ಞರು)

ಬೆಂಗಳೂರಿನಲ್ಲಿ ನಡೆದ ರಣಜಿ ಸೆಮಿಫೈನಲ್ ಪಂದ್ಯಗಳಲ್ಲಿ ಕರ್ನಾಟಕದ ಸಾಧನೆ

ಪಂದ್ಯ-11, ಗೆಲುವು-01, ಸೋಲು-04, ಡ್ರಾ-06

1951/52: ಮುಂಬೈ ವಿರುದ್ಧ ಇನ್ನಿಂಗ್ಸ್ ಮತ್ತು 7 ರನ್ ಸೋಲು

1963/64: ಮುಂಬೈ ವಿರುದ್ಧ 7 ವಿಕೆಟ್ ಸೋಲು

1965/66: ರಾಜಸ್ಥಾನ ವಿರುದ್ಧ 1 ವಿಕೆಟ್ ಸೋಲು

1968/69: ಬಂಗಾಳ ವಿರುದ್ಧ 115 ರನ್ ಸೋಲು

1973/74: ಮುಂಬೈ ವಿರುದ್ಧ ಡ್ರಾ, ಇನ್ನಿಂಗ್ಸ್ ಮುನ್ನಡೆ

1978/79: ಬರೋಡ ವಿರುದ್ಧ ಇನ್ನಿಂಗ್ಸ್ ಮತ್ತು 23 ರನ್ ಜಯ

1981/82: ಮುಂಬೈ ವಿರುದ್ಧ ಡ್ರಾ, ಇನ್ನಿಂಗ್ಸ್ ಮುನ್ನಡೆ

1984/85: ದೆಹಲಿ ವಿರುದ್ಧ ಡ್ರಾ, ಇನ್ನಿಂಗ್ಸ್ ಹಿನ್ನಡೆ

1995/96: ಹೈದರಾಬಾದ್ ವಿರುದ್ಧ ಡ್ರಾ, ಇನ್ನಿಂಗ್ಸ್ ಮುನ್ನಡೆ

1999/00: ಹೈದರಾಬಾದ್ ವಿರುದ್ಧ ಡ್ರಾ, ಇನ್ನಿಂಗ್ಸ್ ಹಿನ್ನಡೆ

2009/10: ಉತ್ತರ ಪ್ರದೇಶ ವಿರುದ್ಧ ಡ್ರಾ, ಇನಿಂಗ್ಸ್ ಮುನ್ನಡೆ

ರಣಜಿ ಟ್ರೋಫಿ: ಕರ್ನಾಟಕ ಮತ್ತು ಸೌರಷ್ಟ್ರ ತಂಡಗಳ ಒಟ್ಟಾರೆ ಸಾಧನೆ

ಕರ್ನಾಟಕ: ಪಂದ್ಯ-438, ಗೆಲುವು-198, ಸೋಲು-65, ಡ್ರಾ-175

ಸೌರಾಷ್ಟ್ರ: ಪಂದ್ಯ-327, ಗೆಲುವು-56, ಸೋಲು-108, ಡ್ರಾ-163

ರಣಜಿ ಟ್ರೋಫಿ: ಕರ್ನಾಟಕ Vs ಸೌರಾಷ್ಟ್ರ

ಪಂದ್ಯ- 09

ಕರ್ನಾಟಕ ಗೆಲುವು- 02

ಸೌರಾಷ್ಟ್ರ ಗೆಲುವು- 04

ಡ್ರಾ- 03

ರಣಜಿ ಟ್ರೋಫಿ: ಕರ್ನಾಟಕ Vs ಸೌರಾಷ್ಟ್ರ

1998/99: ಕರ್ನಾಟಕಕ್ಕೆ 197 ರನ್ ಜಯ (ಬೆಂಗಳೂರು)

2006/07: ಪಂದ್ಯ ಡ್ರಾ, ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ (ರಾಜ್ ಕೋಟ್)

2007/08: ಕರ್ನಾಟಕಕ್ಕೆ 3 ರನ್ ಸೋಲು (ಮೈಸೂರು)

2008/09: ಕರ್ನಾಟಕಕ್ಕೆ 5 ವಿಕೆಟ್ ಸೋಲು (ಮುಂಬೈ)

2009/10: ಕರ್ನಾಟಕಕ್ಕೆ 6 ವಿಕೆಟ್ ಗೆಲುವು (ರಾಜ್ ಕೋಟ್)

2011/12: ಪಂದ್ಯ ಡ್ರಾ, ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ (ಬೆಂಗಳೂರು)

2012/13: ಕ್ವಾರ್ಟರ್ ಫೈನಲ್: ಡ್ರಾ, ಸೌರಾಷ್ಟ್ರಕ್ಕೆ ಇನ್ನಿಂಗ್ಸ್ ಮುನ್ನಡೆ (ರಾಜ್ ಕೋಟ್)

2016/17: ಕರ್ನಾಟಕಕ್ಕೆ 4 ವಿಕೆಟ್ ಸೋಲು (ಪಟಿಯಾಲ)

2018/19: ಕರ್ನಾಟಕಕ್ಕೆ 87 ರನ್ ಸೋಲು (ರಾಜ್ ಕೋಟ್)

ರಣಜಿ ಟ್ರೋಫಿ: ಕರ್ನಾಟಕ Vs ಸೌರಾಷ್ಟ್ರ

Highest Total in an Innings
  TotalVenueSeason
 Karnataka570Rajkot2006/07
 Saurashtra718-9Rajkot2012/13
 
Lowest Total in an innings
  TotalVenueSeason
 Karnataka91Rajkot2018/19
 Saurashtra79Rajkot2018/19
Highest Individual Score
  ScorePlayerVenueSeason
 Karnataka177MK Pandey Rajkot2012/13
 Saurashtra352CA Pujara Rajkot2012/13
Best Innings Bowling
  W/RCPlayerVenueSeason
 Karnataka6-111J SuchithRajkot2018/19
 Saurashtra7-103DA JadejaRajkot2018/19
Best Match Bowling
  W/RCPlayerVenueSeason
 Karnataka10-142D GaneshBangalore1998/99
 Saurashtra11-147DA JadejaRajkot2018/19

Way to Semi Finals by Karnataka in 2018/19

Start DatevsVenueResult for Karnataka
Nov 12, 2018VidNagpurDrawn – Lead Gained
Nov 20,2018MumBelagaviDrawn – Lead Gained
Nov 28,2018MahMysoreWon by 7 wkts
Dec 06, 2018SauRajkotLost by 87 runs
Dec 14, 2018GujSuratDrawn – Lead Gained
Dec 22, 2018RlysShimogaWon by 176 runs
Dec 30, 2018ChaBengaluru (Alur)Won by 198 runs
Jan 07, 2019BarVadodaraLost by 2 wkts
Jan 15, 2019 (Q/F)RajBangaloreWon by 6 wkts
PlayedWonLostDrawn
9423

Way to Semi Finals by Saurashtra in 2018/19

Start DatevsVenueResult for Saurashtra
Nov 1, 2018ChaRajkotdrawn – lead gained
Nov 12, 2018RlyRajkotwon by 3 wkts
Nov 20, 2018GujNadiaddrawn – lead gained
Nov 28, 2018BarRajkotdrawn – lead conceded
Dec 6, 2018KnkRajkotwon by 87 runs
Dec 14, 2018MahNasikwon by 5 wkts
Dec 22, 2018MumMumbaidrawn – lead conceded
Jan 7, 2019VidRajkotdrawn – lead gained
Jan 15, 2019 (Q/F)UPLucknowwon by 6 wkts
PlayedWonLostDrawn
9405

Most Runs in 2018/19 (300 & above)

KarnatakaRunsMts
KV Siddhaarth7089
D Nischal6209
Shreyas Gopal3769
MK Pandey3514
R Vinay Kumar3126
SaurashtraRunsMts
HM Desai7389
SP Jackson6919
SS Patel5619
AV Vasvada4559
JN Shah4275
PN Mankad3608
VM Jadeja3174

Most Wickets in 2018/19 (20 & above)

KarnatakaWktsMts
Shreyas Gopal319
RG More307
J Suchith245
A Mithun227
K Gowtham204
SaurashtraWktsMts
DA Jadeja459
JD Unadkat286
C Sakariya256

OVERALL RECORD IN RANJI TROPHY

Highest Total in an Innings
 TotalVsVenueSeason
Karnataka791-6 dBenKolkata1990/91
Saurashtra718-9KnkRajkot2012/13
Lowest Total in an innings
 TotalVsVenueSeason
Karnataka28MumBangalore1951/52
Saurashtra25MumMumbai1951/52
Highest Individual Score
 ScorePlayerVsVenueSeason
Karnataka337KL RahulUPBangalore2014/15
Saurashtra352CA Pujara KnkRajkot2012/13
Best Innings Bowling
 W/RCPlayerVsVenueSeason
Karnataka9-72BS ChandrasekharKerBijapur1969/70
Saurashtra7-31RA JadejaHydRajkot2008/09
Best Match Bowling
 W/RCPlayerVsVenueSeason
Karnataka16-99A KumbleKerTellicherry1994/95
Saurashtra13-126RA JadejaJhaRajkot2015/16

1 COMMENT

  1. Very exhaustive write up with facts and figures I remember BS Chandra’s bowling in Bijapur in 1969-70 with that amazing bowling .As also the time when Karnataka piled huge runs against Bengal.
    Only way we can win easy play sensibly it is a 5 day affair let us not bat too fast score against bad balls and defend good ball. Most important is our our fielding has to be on their toes no more butter fingered fielders dropping catches..Chase the ball to boundary to cut off even a single run .All the best boys whether Pujara is there or not

LEAVE A REPLY

Please enter your comment!
Please enter your name here

8 − 3 =