ರಣಜಿ ಫೈನಲ್: ವಿದರ್ಭ ವಿರುದ್ಧ ನಡೆಯಲಿಲ್ಲ ಕರ್ನಾಟಕವನ್ನು ಸೋಲಿಸಿದ ಪೂಜಾರ ಆಟ..!

0
PC: BCCI

ನಾಗ್ಪುರ, ಫೆಬ್ರವರಿ 4: ವಿದರ್ಭ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರದ ಸ್ಟಾರ್ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ ಕೇವಲ ಒಂದು ರನ್ನಿಗೆ ಔಟಾಗಿದ್ದಾರೆ.

ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ 2ನೇ ದಿನವಾದ ಸೋಮವಾರ ಪೂಜಾರ ಕೇವಲ 11 ಎಸೆತಗಳನ್ನೆದುರಿಸಿ ಒಂದು ರನ್ನಿಗೆ ಔಟಾದರು. ವಿದರ್ಭ ತಂಡದ ಎಡಗೈ ಸ್ಪಿನ್ನರ್ ಆದಿತ್ಯ ಸರ್ವಾಟೆ ಬೌಲಿಂಗ್ ನಲ್ಲಿ ಪೂಜಾರ, ಮೊದಲ ಸ್ಲಿಪ್ ನಲ್ಲಿ ವಸೀಮ್ ಜಾಫರ್ ಅವರಿಗೆ ಕ್ಯಾಚಿತ್ತು ಔಟಾದರು. ವಿದರ್ಭ ತಂಡದ 312 ರನ್ ಗಳಿಗೆ ಪ್ರತಿಯಾಗಿ ಸೌರಾಷ್ಟ್ರ ತಂಡ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದ್ದು, ಇನ್ನೂ 154 ರನ್ ಹಿನ್ನಡೆಯಲ್ಲಿದೆ.

PC: BCCI

ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಸೋಲಿಗೆ ಕಾರಣರಾಗಿದ್ದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಅಜೇಯ 131 ರನ್ ಗಳಿಸಿದ್ದ ಪೂಜಾರ ಸೌರಾಷ್ಟ್ರ ತಂಡವನ್ನು ಫೈನಲ್ ಗೆ ಮುನ್ನಡೆಸಿದ್ದರು. ಆದರೆ ಆ ಪಂದ್ಯದಲ್ಲಿ ಎರಡು ಬಾರಿ ಔಟಾದರು ಕ್ರೀಸ್ ತೊರೆಯದೆ ಕ್ರೀಡಾಸ್ಫೂರ್ತಿ ಮರೆತದ್ದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಥಮ ಇನ್ನಿಂಗ್ಸ್ ನಲ್ಲಿ ಅಭಿಮನ್ಯು ಮಿಥುನ್ ದಾಳಿಯಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತಿದ್ದ ಪೂಜಾರ ಕ್ರೀಸ್ ತೊರೆಯಲು ನಿರಾಕರಿಸಿದ್ದರು. ಬರೋಡದ ಅಂಪೈರ್ ಸೈಯದ್ ಖಾಲಿದ್ ಹುಸೇನ್ ನಾಟೌಟ್ ತೀರ್ಪು ನೀಡಿದ್ದರು.

2ನೇ ಇನ್ನಿಂಗ್ಸ್ ನಲ್ಲೂ ಪೂಜಾರ 34 ರನ್ ಗಳಿಸಿದ್ದ ವೇಳೆ ಆರ್.ವಿನಯ್ ಕುಮಾರ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಗೆ ಕ್ಯಾಚಿತ್ತಿದ್ದರು. ಆದರೆ ಅಂಪೈರ್ ಹುಸೇನ್ ಮತ್ತೊಮ್ಮೆ ನಾಟೌಟ್ ತೀರ್ಪಿತ್ತು ಕರ್ನಾಟಕದ ಆಟಗಾರರ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದರು. ಇತ್ತ ಪೂಜಾರ ಕೂಡ ಕ್ರೀಸ್ ತೊರೆಯಲಿಲ್ಲ. ಅಂಪೈರ್ ನಿರ್ಧಾರದಿಂದ ಆಕ್ರೋಶಗೊಂಡ ವಿನಯ್ ಕುಮಾರ್ ಕನ್ನಡಕ ಹಾಕಿಕೊಂಡು ಅಂಪೈರಿಂಗ್ ನಡೆಸುವಂತೆ ಅಂಪೈರ್ ಸೈಯದ್ ಹುಸೇನ್ ಗೆ ಸನ್ನೆ ಮಾಡಿದ್ದರು.

ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳ ನಡುವಿನ ರಣಜಿ ಫೈನಲ್ ಪಂದ್ಯದ 2ನೇ ದಿನದಾಟದ ಹೈಲೈಟ್ಸ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

fourteen − six =