ರಣಜಿ: ವಿನಯ್‌ಗೆ ಬೆನ್ನು ನೋವು, ಶ್ರೇಯಸ್ ಗೋಪಾಲ್‌ಗೆ ಕರ್ನಾಟಕ ತಂಡದ ಸಾರಥ್ಯ

0

ಬೆಳಗಾವಿ, ನವೆಂಬರ್ ೨೦: ಕರ್ನಾಟಕ ತಂಡದ ನಾಯಕ ಆರ್.ವಿನಯ್ ಕುಮಾರ್ ಬೆನ್ನು ನೋವಿನ ಗಾಯಕ್ಕೊಳಗಾಗಿರುವುದರಿಂದ ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಶ್ರೇಯಸ್ ಗೋಪಾಲ್ ಮುನ್ನಡೆಸುತ್ತಿದ್ದಾರೆ.

ಮುಂಬೈ ವಿರುದ್ಧದ ಎಲೈಟ್ ‘ಎ’ ಗುಂಪಿನ ಪಂದ್ಯ ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಮಂಗಳವಾರ ಆರಂಭಗೊಂಡಿದ್ದು. ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅನುಭವಿ ವಿನಯ್ ಅವರಿಗೆ ಎರಡರಿಂದ ಮೂರು ದಿನಗಳ ವಿಶ್ರಾಂತಿ ಅಗತ್ಯವಿರುವುದರಿಂದ ಮುಂಬೈ ವಿರುದ್ಧದ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದರು. ಹೀಗಾಗಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಯಿತು.

ಕಳೆದ ವಿದರ್ಭ ವಿರುದ್ಧದ ಪಂದ್ಯದ ಮೂಲಕ ರಣಜಿ ವೃತ್ತಿಜೀವನದಲ್ಲಿ ೧೦೦ ಪಂದ್ಯಗಳನ್ನಾಡಿದ ಹಿರಿಮೆಗೆ ಪಾತ್ರರಾಗಿದ್ದ ವಿನಯ್ ಕುಮಾರ್ ಅವರನ್ನು ಕೆಎಸ್‌ಸಿಎ ವತಿಯಿಂದ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ವಿನಯ್ ಕುಮಾರ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here

sixteen − 13 =