ರಣಜಿ ಸೆಮಿಫೈನಲ್: ಆಪದ್ಬಾಂಧವನಾದ ಶ್ರೇಯಸ್, ಕರ್ನಾಟಕದ ಗೆಲುವಿಗೆ ವೇದಿಕೆ ಸಜ್ಜು

0

ಬೆಂಗಳೂರು, ಜನವರಿ 26: ಸೌರಾಷ್ಟ್ರ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರು. ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ.

ಶ್ರೇಯಸ್ ಗೋಪಾಲ್(ಅಜೇಯ 61) ಮತ್ತು ವೇಗಿ ಅಭಿಮನ್ಯು ಮಿಥುನ್(ಅಜೇಯ 35) ಅವರ ಅಜೇಯ ಜೊತೆಯಾಟದಿಂದಾಗಿ ಕರ್ನಾಟಕ ತಂಡ ತನ್ನ 2ನೇ ಇನ್ನಿಂಗ್ಸ್ ನಲ್ಲಿ 3ನೇ ದಿನದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿದ್ದು ಸದ್ಯ 276 ರನ್ ಗಳ ಮುನ್ನಡೆಯಲ್ಲಿದೆ. 

ಬೌಲರ್ ಗಳಿಗೆ ನೆರವು ನೀಡುತ್ತಿರುವ ಪಿಚ್ ನಲ್ಲಿ ಕೆಚ್ಚೆದೆಯ ಆಟವಾಡಿ ಪ್ರಥಮ ಇನ್ನಿಂಗ್ಸ್ ನಲ್ಲಿ 87 ರನ್ ಗಳಿಸಿದ್ದ ಆಲ್ರೌಂಡರ್ ಶ್ರೇಯಸ್ ಗೋಪಾಲ್ 2ನೇ ಇನ್ನಿಂಗ್ಸ್ ನಲ್ಲೂ ಜವಾಬ್ದಾರಿ ಪ್ರದರ್ಶಿಸಿ ಅಜೇಯ 61 ರನ್ ಗಳಿಸಿದ್ದಾರೆ. ಅಲ್ಲದೆ ಮುರಿಯದ 9ನೇ ವಿಕೆಟ್ ಗೆ ಮಿಥುನ್ ಅವರೊಂದಿಗೆ ಅತ್ಯಮೂಲ್ಯ 61 ರನ್ ಸೇರಿಸಿ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈಗಾಗಲೇ ಬ್ಯಾಟ್ಸ್ ಮನ್ ಗಳ ಪಾಲಿಗೆ ಕಬ್ಬಿಣದ ಕಡಲೆಯಂತಾಗಿರುವ ಈ ಪಿಚ್ ನಲ್ಲಿ 4ನೇ ಹಾಗೂ 5ನೇ ದಿನ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮತ್ತಷ್ಟು ಕಠಿಣವಾಗುವ ಸಾಧ್ಯತೆಯಿದೆ. ಪಿಚ್ ನಲ್ಲಿ ಚೆಂಡು ಪುಟಿತ ಕಾಣುತ್ತಿದ್ದು, ಕೆಲವೊಮ್ಮೆ ಚೆಂಡು ಅನಿರೀಕ್ಷಿತವಾಗಿ ಕೆಳಮಟ್ಟದಲ್ಲಿ ನುಗ್ಗುತ್ತಿದೆ. ಅಲ್ಲದೆ ಪಿಚ್ ನ ಪ್ರಮುಖ ಭಾಗದಲ್ಲಿ ಬಿರುಕುಗಳೂ ಕೂಡ ಕಾಣಿಸಿಕೊಂಡಿರುವುದರಿಂದ ಗುರಿ ಬೆನ್ನಟ್ಟುವ ವೇಳೆ 275+ ಸವಾಲು ಸೌರಾಷ್ಟ್ರಕ್ಕೆ ಕಠಿಣವಾಗಲಿದೆ.

Brief scores 

Karnataka: 275 and 237/8 in 78 overs (Shreyas Gopal 61 not out, Abhimanyu Mithun 35 not out, Jaidev Unadkat 3/35) Vs Saurashtra: 236 all out in 71 overs).

LEAVE A REPLY

Please enter your comment!
Please enter your name here

seventeen + seventeen =