ರಣಜಿ: ಸೆಮಿಫೈನಲ್ ಸೋತರೂ ಕರ್ನಾಟಕವೇ ಚಾಂಪಿಯನ್..!

0


ಬೆಂಗಳೂರು, ಜನವರಿ 28: ಎಂಟು ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 5 ವಿಕೆಟ್ ಗಳ ಸೋಲು ಕಂಡು ನಿರಾಸೆ ಅನುಭವಿಸಿದೆ.

ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಸೋಲಿಗೆ ಅಂಪೈರ್ ಗಳ ವಿವಾದಾತ್ಮಕ ತೀರ್ಪುಗಳು ಕಾರಣವಾದವು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಅಜೇಯ 131 ರನ್ ಬಾರಿಸಿ ಸೌರಾಷ್ಟ್ರವನ್ನು ಗೆಲ್ಲಿಸಿದ ಚೇತೇಶೇವರ್ ಪೂಜಾರ ಕ್ರೀಡಾಸ್ಫೂರ್ತಿಯನ್ನು ಮರೆತದ್ದು ಕರ್ನಾಟಕದ ಸೋಲಿಗೆ ಕಾರಣ. ಪ್ರಥಮ ಇನ್ನಿಂಗ್ಸ್ ನಲ್ಲಿ ಪೂಜಾರ 1 ರನ್ ಗಳಿಸಿದ್ದಾಗ ವೇಗಿ ಅಭಿಮನ್ಯು ಮಿಥುನ್ ದಾಳಿಯಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತಿದ್ದರು. ಆದರೆ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. 

ದ್ವಿತೀಯ ಇನ್ನಿಂಗ್ಸ್ ನಲ್ಲಿ ಪೂಜಾರ 34 ರನ್ ಗಳಿಸಿದ್ದಾಗ ವಿನಯ್ ಕುಮಾರ್ ಎಸೆತದಲ್ಲಿ ಮತ್ತೆ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಕೈಗೆ ಕ್ಯಾಚ್ ನೀಡಿದ್ದರು. ಆದರೆ ಮತ್ತೆ ಪ್ರಮಾದವೆಸಗಿದ ಅಂಪೈರ್ ಸೈಯದ್ ಹುಸೇನ್ ನಾಟೌಟ್ ತೀರ್ಪು ನೀಡಿ ಅಚ್ಚರಿ ಮೂಡಿಸಿದ್ದರು. ಈ ಎರಡು ತೀರ್ಪುಗಳು ಕರ್ನಾಟಕದ ಸೋಲಿಗೆ ಕಾರಣವಾದವು.

ಸೆಮಿಫೈನಲ್ ನಲ್ಲಿ ಸೋತರೂ ಕರ್ನಾಟಕ ತಂಡಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಅಭಿನಂದನೆ ಸಲ್ಲಿಸಿದೆ. ‘’ನೀವು ಸೆಮಿಫೈನಲ್ ನಲ್ಲಿ ಸೋತಿರಬಹುದು. ಆದರೆ ನಮ್ಮ ಪಾಲಿಗೆ ನೀವೇ ಚಾಂಪಿಯನ್ ಗಳು’’ ಎಂದು KSCA ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದೆ.

LEAVE A REPLY

Please enter your comment!
Please enter your name here

17 + seventeen =