ಖೇಲ್‌ರತ್ನ ಪ್ರಶಸ್ತಿಗೆ ವಿರಾಟ್, ಮೀರಾಬಾಯಿ ಹೆಸರು ಶಿಫಾರಸು

0

ಬೆಂಗಳೂರು, ಸೆಪ್ಟೆಂಬರ್ 17: ಕ್ರೀಡಾ ಸಾಧಕರಿಗೆ ನೀಡಲಾಗುವ ದೇಶದ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾರತ ಕ್ರಿತೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಅಲ್ಲದೆ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮತಿ ಮಂಧನ, ಜಾವೆಲಿನ್ ತಾರೆ ನೀರಜ್ ಚೋಪ್ರಾ, ಅಥ್ಲೀಟ್ ಹಿಮಾ ದಾಸ್, ಟೆನಿಸ್ ತಾರೆ ರೋಹನ್ ಬೋಪಣ್ಣ ಸಹಿತ 20 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು
1. ವಿರಾಟ್ ಕೊಹ್ಲಿ (ಕ್ರಿಕೆಟ್)
2. ಮೀರಾಬಾಯಿ ಚಾನು (ವೇಟ್ ಲಿಫ್ಟಿಂಗ್)

ಅರ್ಜುನ ಪ್ರಶಸ್ತಿಗೆ ಶಿಫಾರಸು
ಸ್ಮತಿ ಮಂಧನ(ಕ್ರಿಕೆಟ್), ನೀರಜ್ ಚೋಪ್ರಾ(ಅಥ್ಲೆಟಿಕ್ಸ್), ಎನ್.ಸಿಕ್ಕಿ ರೆಡ್ಡಿ(ಬ್ಯಾಡ್ಮಿಂಟನ್), ಹಿಮಾ ದಾಸ್(ಅಥ್ಲೆಟಿಕ್ಸ್), ರೋಹನ್ ಬೋಪಣ್ಣ(ಟೆನಿಸ್), ಮನಿಕಾ ಬಾತ್ರಾ(ಟೇಬಲ್ ಟೆನಿಸ್), ಜಿನ್ಸನ್ ಜಾನ್ಸನ್(ಅಥ್ಲೆಟಿಕ್ಸ್), ಸತೀಶ್ ಕುಮಾರ್(ಬಾಕ್ಸಿಂಗ್), ಶುಭಂಕರ್ ಶರ್ಮಾ(ಗಾಲ್), ಮನ್‌ಪ್ರೀತ್ ಸಿಂಗ್(ಹಾಕಿ), ಸವಿತಾ(ಹಾಕಿ), ರವಿ ರಾಥೋಡ್(ಪೋಲೊ), ರಾಹಿ ಸರ್ನೊಬಾಟ್(ಶೂಟಿಂಗ್), ಅನುಕುಲ್ ಮಿತ್ತಲ್(ಶೂಟಿಂಗ್), ಶ್ರೇಯಸಿ ಸಿಂಗ್(ಶೂಟಿಂಗ್), ಜಿ.ಸಾಥಿಯನ್(ಟೇಬಲ್ ಟೆನಿಸ್), ಸುಮಿತ್(ಕುಸ್ತಿ), ಪೂಜಾ ಕಾದಿಯಾನ್(ವುಶು), ಅಂಕುರ್ ದಾಮ(ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್(ಪ್ಯಾರಾ ಬ್ಯಾಡ್ಮಿಂಟನ್).

LEAVE A REPLY

Please enter your comment!
Please enter your name here

sixteen − seven =