ರಾಜ್ಯೋತ್ಸವದಂದೇ ಐಸಿಸಿ ಹಾಲ್ ಆಫ್ ಫೇಮ್ ಗೌರವ ಸ್ವೀಕರಿಸಿದ ದ್ರಾವಿಡ್

0

ತಿರುವನಂತಪುರಂ, ನವೆಂಬರ್ 2: ಕನ್ನಡ ರಾಜ್ಯೋತ್ಸವದ ದಿನ ಕನ್ನಡಿಗ ರಾಹುಲ್ ದ್ರಾವಿಡ್ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ಹಾಲ್ ಆಫ್ ಫೇಮ್ ಗೌರವ ಸ್ವೀಕರಿಸಿದ್ದಾರೆ. ತಿರುವನಂತರಪುರಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 5ನೇ ಏಕದಿನ ಪಂದ್ಯಕ್ಕೂ ಮೊದ್ಲು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಕರ್ನಾಟಕದ ದಿಗ್ಗಜ ಆಟಗಾರ ದ್ರಾವಿಡ್ ಅವರಿಗೆ ಹಾಲ್ ಆಫ್ ಫೇಮ್ ಗೌರವವನ್ನು ಹಸ್ತಾಂತರಿಸಿದರು.

ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಭಾರತದ 5ನೇ ಆಟಗಾರನೆಂಬ ಹೆಗ್ಗಳಿಕೆಗೆ ರಾಹುಲ್ ದ್ರಾವಿಡ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2009ರಲ್ಲಿ ಮಾಜಿ ನಾಯಕರಾದ ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, 2015ರಲ್ಲಿ ಮತ್ತೊಬ್ಬ ಕನ್ನಡಿಗ ಅನಿಲ್ ಕುಂಬ್ಳೆ ಐಸಿಸಿಯ ಹಾಲ್ ಆಫ್ ಫೇಮ್ ಗೌರವ ಸ್ವೀಕರಿಸಿದ್ದರು.

45 ವರ್ಷದ ದ್ರಾವಿಡ್ ಭಾರತ ಪರ 164 ಟೆಸ್ಟ್ ಪಂದ್ಯಗಳನ್ನಾಡಿದ್ದು, 52.31ರ ಸರಾಸರಿಯಲ್ಲಿ 36 ಶತಕ, 63 ಅರ್ಧಶತಕಗಳ ಸಹಿತ 13,288 ರನ್ ಕಲೆ ಹಾಕಿದ್ದಾರೆ. 344 ಏಕದಿನ ಪಂದ್ಯಗಳಿಂದ 39.26ರ ಸರಾಸರಿಯಲ್ಲಿ 12 ಶತಕ ಹಾಗೂ 83 ಅರ್ಧಶತಕಗಳೊಂದಿಗೆ 10,889 ರನ್ ಗಳಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ಏಕೈಕ ಟಿ20 ಪಂದ್ಯವಾಡಿರುವ ದ್ರಾವಿಡ್ 31 ರನ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

16 − 6 =