ರಣಜಿ ಟ್ರೋಫಿ: ರಾಜ್ ಕೋಟ್ ಪಿಚ್ ಬಗ್ಗೆ KSCA ಕಿಡಿ, ಬಿಸಿಸಿಐಗೆ ದೂರು

0

ಬೆಂಗಳೂರು, ಡಿಸೆಂಬರ್ 9: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದ ಪಿಚ್ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಿಡಿ ಕಾರಿದ್ದು, ರಣಜಿ ಪಂದ್ಯಕ್ಕೆ ಕಳಪೆ ಪಿಚ್ ಒದಗಿಸಿದ್ದರ ಬಗ್ಗೆ ಬಿಸಿಸಿಐಗೆ ದೂರು ನೀಡಿದೆ.

SCA ಮೈದಾನದಲ್ಲಿ ಶನಿವಾರ ಅಂತ್ಯಗೊಂಡ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ 87 ರನ್ ಗಳ ಸೋಲು ಕಂಡಿತ್ತು. ಮೂರೇ ದಿನಗಳಲ್ಲಿಅಂತ್ಯಗೊಂಡ ಪಂದ್ಯದಲ್ಲಿ ಉರುಳಿದ 40 ವಿಕೆಟ್ಸ್ ಪೈಕಿ 38 ವಿಕೆಟ್ ಗಳನ್ನು ಸ್ಪಿನ್ನರ್ ಗಳೇ ಉರುಳಿಸಿದ್ದರು. ಅದರಲ್ಲೂ ಪಂದ್ಯದ 3ನೇ ದಿನವೇ 20 ವಿಕೆಟ್ ಗಳು ಪತನಗೊಂಡಿದ್ದು, ದ್ವಿತೀಯ ಇನ್ನಿಂಗ್ಸ್ ನಲ್ಲಿ ಸೌರಾಷ್ಟ್ರ 79 ರನ್ನಿಗೆ ಆಲೌಟಾದರೆ, ಕರ್ನಾಟಕ 91 ರನ್ನಿಗೊ ಆಲೌಟಾಗಿ ಪಂದ್ಯ ಸೋತಿತ್ತು.

ಕಳಪೆ ಪಿಚ್ ಬಗ್ಗೆ ಕಿಡಿ ಕಾರಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಂಗಾಮಿ ಕಾರ್ಯದರ್ಶಿ ಆರ್.ಸುಧಾಕರ್ ರಾವ್ ‘’ರಣಜಿ ಪಂದ್ಯಕ್ಕೆ ನೀಡಲಾಗಿದ್ದ ಪಿಚ್ ಅನ್ನು ಸರಿಯಾಗಿ ಸಿದ್ಧಪಡಿಸಲಾಗಿರಲಿಲ್ಲ. ಪಂದ್ಯದ ಮೊದಲ ದಿನವೇ ನಾವು ಪಿಚ್ ಬಗ್ಗೆ ಬಿಸಿಸಿಐಗೆ ದೂರು ಸಲ್ಲಿಸಿದ್ದೆವು. ಸೌರಾಷ್ಟ್ರ ತನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಒಬ್ಬ ಮೀಡಿಯಂ ಪೇಸ್ ಬೌಲರ್ ಗೂ ಸ್ಥಾನ ನೀಡಿರಲಿಲ್ಲ. ಅಲ್ಲದೆ ಅವರು ಸ್ಪಿನ್ ಬೌಲರ್ ಮೂಲಕ ಬೌಲಿಂಗ್ ಆರಂಭಿಸಿದ್ದರು. ಇದೆಲ್ಲಾ ಪೂರ್ವಯೋಜಿತ ಪ್ಲಾನ್ ರೀತಿ ಕಾಣುತ್ತದೆ. ಪಿಚ್ ಸಿದ್ಧ ಪಡಿಸುವ ವೇಳೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ತಟಸ್ಥ ಪಿಚ್ ಕ್ಯುರೇಟರ್ ಅವರ ಸಲಹೆ ಪಡೆದಂತೆ ಕಾಣುತ್ತಿಲ್ಲ. ಹೀಗಾಗಿ ಇದಕ್ಕೆ ಶಿಕ್ಷೆ ಎಂಬಂತೆ ಪ್ರವಾಸಿ ತಂಡವಾದ ಕರ್ನಾಟಕಕ್ಕೆ ಪೂರ್ಣ ಅಂಕಗಳನ್ನು ನೀಡಬೇಕು’’ ಎಂದು ಆಗ್ರಹಿಸಿದ್ದಾರೆ.

ಪಿಚ್ ಬಗ್ಗೆ ಮಾತನಾಡಿರುವ ಕರ್ನಾಟಕ ತಂಡದ ನಾಯಕ ಆರ್.ವಿನಯ್ ಕುಮಾರ್ ‘’ಈ ಪಂದ್ಯ ನೇರಪ್ರಸಾರಗೊಂಡಿತ್ತು. ಹೀಗಾಗಿ ಪಿಚ್ ಯಾವ ರೀತಿ ವರ್ತಿಸಿತು ಎಂಬುದನ್ನು ಎಲ್ಲರೂ ವೀಕ್ಷಿಸಿದ್ದಾರೆ. ಈ ಪಿಚ್ ನಲ್ಲಿ ನಾವು 2ನೇ ಇನ್ನಿಂಗ್ಸ್ ನಲ್ಲಿ 91 ರನ್ ಗಳಿಸಿದ್ದ ಬಗ್ಗೆ ನನಗೆ ತೃಪ್ತಿಯಿದೆ’’ ಎಂದಿದ್ದಾರೆ.

ಸೌರಾಷ್ಟ್ರ ವಿರುದ್ಥದ ಸೋಲಿನೊಂದಿಗೆ ಕರ್ನಾಟಕ ತಂಡ ನಾಲ್ಕು ಪಂದ್ಯಗಳಿಂದ ಕೇವಲ 12 ಅಂಕ ಗಳಿಸಿದಂತಾಗಿದ್ದು, ಎಲೈಟ್ ‘ಎ’ ಗುಂಪಿನಲ್ಲಿ 5ನೈ ಸ್ಥಾನಕ್ಕೆ ಕುಸಿದಿದೆ. ಡಿಸೆಂಬರ್ 14ರಿಂದ ಸೂರತ್ ನಲ್ಲಿ ಆರಂಭವಾಗಲಿರುವ ತನ್ನ 5ನೇ ಪಂದ್ಯದಲ್ಲಿ ಕರ್ನಾಟಕ ತಂಡ ಗುಜರಾತ್ ತಂಡವನ್ನು 

LEAVE A REPLY

Please enter your comment!
Please enter your name here

eighteen + ten =