ರಾಬಿನ್ ಉತ್ತಪ್ಪ ಮಗನ ಸೆಲ್ಫಿ ಕ್ರೇಜ್ ನೋಡಿದಿರಾ..?

0

ಬೆಂಗಳೂರು, ಏಪ್ರಿಲ್ 4: ಕೊಡಗಿನ ಕಲಿ ರಾಬಿನ್ ಉತ್ತಪ್ಪ ಅವರ ಪುತ್ರನಿಗೆ ಒಂದೂವರೆ ವರ್ಷ ತುಂಬಿದೆ. ಈ ವಯಸ್ಸಲ್ಲೇ ಉತ್ತಪ್ಪ ಮಗನಿಗೆ ತುಂಬಾ ಸೆಲ್ಫಿ ಕ್ರೇಜ್ ಇದ್ಯಂತೆ. ಹಾಗಂತ ಈ ವಿಷ್ಯವನ್ನು ನಾವ್ ಹೇಳ್ತಿಲ್ಲ. ಸ್ವತಃ ರಾಬಿನ್ ಉತ್ತಪ್ಪ ಅವರೇ ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಟ್ವಿಟರ್ ಮೂಲಕ ಬಹಿರಂಗ ಪಡಿಸಿದ್ದಾರೆ.

ಪುತ್ರ ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಉತ್ತಪ್ಪ, ”ಕಿಂಗ್ ಆಫ್ ಸೆಲ್ಫಿ” ಎಂದು ಬರೆದುಕೊಂಡಿದ್ದಾರೆ. ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಐಪಿಎಲ್-12ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ತಂಡ, ಶುಕ್ರವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ ಸಾರಥ್ಯದ ಆರ್ ಸಿ ಬಿ ತಂಡ, ಟೂರ್ನಿಯಲ್ಲಿ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದೆ.

LEAVE A REPLY

Please enter your comment!
Please enter your name here

5 − 1 =