ರಾಯಲ್ಸ್ ಕಿಡ್ಸ್ ಕಪ್ ಕ್ರಿಕೆಟ್: KIOC ತಂಡಕ್ಕೆ ಜಯ ತಂದ ಡೇನಿಯೆಲ್

0

ಬೆಂಗಳೂರು, ನವೆಂಬರ್ 25: ಒಂಬತ್ತು ವರ್ಷದ ಬಾಲಕ ಡೇನಿಯೆಲ್ ಜೇಮ್ಸ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ KIOC ಬಾಲಕರ ತಂಡ, RX ಅಕಾಡೆಮಿ ತಂಡದ ವಿರುದ್ಧ ಗೆಲುವು ದಾಖಲಿಸಿದೆ.
ಯಲಹಂಕ ಬಳಿಯಿರುವ ಹೈಪರ್ ಟರ್ಫ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 110 ರನ್ ಗಳ ಗುರಿ ಬೆನ್ನತ್ತಿದ KIOC ಬಾಲಕರ ತಂಡ 18.5 ಓವರ್ ಗಳಲ್ಲಿ ಗುರಿ ತಲುಪಿ ಸುಲಭ ಜಯ ಗಳಿಸಿತು. ಆರಂಭಿಕ ಬ್ಯಾಟ್ಸ್ ಮನ್ ಡೇನಿಯೆಲ್ 54 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 38 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಅಲ್ಲದೆ ಬೌಲಿಂಗ್ ನಲ್ಲೂ ಮಿಂಚಿದ ಡೇನಿಯೆಲ್ 4 ಓವರ್ ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟರು.

LEAVE A REPLY

Please enter your comment!
Please enter your name here

two + five =