ರಾಯಲ್ ಚಾಲೆಂಜರ್ಸ್‌ಗೆ ಗ್ಯಾರಿ ಕರ್ಸ್ಟನ್ ನೂತನ ಕೋಚ್, ಮೆಂಟರ್

0
Gary Kirsten

ಬೆಂಗಳೂರು, ಆಗಸ್ಟ್ 30: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಭಾರತದ 2011ರ ವಿಶ್ವಕಪ್ ವಿಜೇತ ತಂಡದ ಕೋಚ್ ಗ್ಯಾರಿ ಕರ್ಸ್ಟನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ.
2018ರ ಐಪಿಎಲ್ ಟೂರ್ನಿಯ ವೇಳೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಗ್ಯಾರಿ ನೇಮಕಗೊಂಡಿದ್ದರು. ಇದೀಗ ನ್ಯೂಜಿಲೆಂಡ್‌ನ ಡೇನಿಯೆಲ್ ವೆಟ್ಟೋರಿ ಅವರಿಗೆ ಕೊಕ್ ನೀಡಿ ನೂತನ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ 8 ವರ್ಷಗಳ ಕಾಲ ವೆಟ್ಟೋರಿ ಆರ್‌ಸಿಬಿ ತಂಡದ ಆಟಗಾರನಾಗಿ, ನಂತರ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
11 ಐಪಿಎಲ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3 ಬಾರಿ ಫೈನಲ್ ಪ್ರವೇಶಿಸಿದ್ದರೂ, ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.

LEAVE A REPLY

Please enter your comment!
Please enter your name here

2 × four =