ರಾಷ್ಟ್ರೀಯ ಈಜು: ಕರ್ನಾಟಕ ತಂಡಕ್ಕೆ ಸಮಗ್ರ ಚಾಂಪಿಯನ್‌ಷಿಪ್

0

ಬೆಂಗಳೂರು, ಸೆಪ್ಟೆಂಬರ್ 23: ಕೇರಳದ ತಿರುವನಂತಪುರಂನಲ್ಲಿ ನಡೆದ 72ನೇ ಹಿರಿಯರ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡಿದೆ.
ಒಟ್ಟು 5 ದಿನಗಳ ಕಾಲ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡ ಒಟ್ಟು 227 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ಷಿಪ್ ಗೆದ್ದಿತು. ಎಸ್‌ಎ್ಐ 202 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಪುರುಷರ ತಂಡ ಒಟ್ಟು 86 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದರೆ, ರೈಲ್ವೇ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್(ಆರ್‌ಎಸ್‌ಪಿಬಿ) 83 ಅಂಕಗಳೊಂದಿಗೆ 2ನೇ ಸ್ಥಾನ ಪಡೆಯಿತು.
ಮಹಿಳಾ ವಿಭಾಗದಲ್ಲಿ ಕರ್ನಾಟಕದ ಈಜುಗಾರ್ತಿಯರ ತಂಡ 119 ಅಂಕಗಳೊಂದಿಗೆ ತಂಡ ಚಾಂಪಿಯನ್‌ಷಿಪ್ ಗಳಿಸಿದರೆ, ಎಸ್‌ಎ್ಐ 98 ಅಂಕಗಳೊಂದಿಗೆ ರನ್ನರ್ಸ್ ಅಪ್ ಸ್ಥಾನ ಪಡೆಯಿತು.
ಕರ್ನಾಟಕದ ಸಲೋನಿ ದಲಾಲ್ ಒಟ್ಟು ಎರಡು ಹೊಸ ದಾಖಲೆಗಳ ಸಹಿತ 3 ಚಿನ್ನದ ಪದಕಗಳೊಂದಿಗೆ ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಈಜಪಟು ಪ್ರಶಸ್ತಿ ಪಡೆದರೆ, ಪುರುಷರ ವಿಭಾಗದ ಪ್ರಶಸ್ತಿ 5 ಚಿನ್ನ ಗೆದ್ದ ಕೇರಳದ ಸಜ್ಜನ್ ಪ್ರಕಾಶ್ ಪಾಲಾಯಿತು.

LEAVE A REPLY

Please enter your comment!
Please enter your name here

1 × 1 =