ರಾಹುಲ್ ನಾಯಕತ್ವದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ‘ಎ’

0
ಟೀಮ್ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಅವರ ಆಕರ್ಷಕ ಕವರ್ ಡ್ರೈವ್ @BCCI

ಮೈಸೂರು, ಫೆಬ್ರವರಿ 15: ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ‘ಎ’ ತಂಡ ಮೈಸೂರಿನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 68 ರನ್ ಗಳಿಂದ ಗೆದ್ದುಕೊಂಡಿದೆ.

ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ ತಂಡ 392 ರನ್ ಗಳಿಗೆ ಆಲೌಟಾಗಿತ್ತು. ನಾಯಕ ರಾಹುಲ್ 81 ರನ್, ಅಭಿಮನ್ಯು ಈಶ್ವರನ್ 117, ಪ್ರಿಯಾಂಕ್ ಪಾಂಚಾಲ್ 50 ರನ್ ಕಲೆ ಹಾಕಿದ್ದರು.

ಇದಕ್ಕುತ್ತರವಾಗಿ ಇಂಗ್ಲೆಂಡ್ ಲಯನ್ಸ್ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 144 ರನ್ ಗಳಿಗೆ ಆಲೌಟಾಗಿ ಫಾಲೋ ಆನ್ ಗೆ ಗುರಿಯಾಗಿತ್ತು. 2ನೇ ಇನ್ನಿಂಗ್ಸ್ ನಲ್ಲೂ ಕುಸಿತ ಕಂಡ ಪ್ರವಾಸಿ ತಂಡ 180 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಈ ಮೂಲಕ ಭಾರತ ‘ಎ’ ತಂಡ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು.

Brief scores

India A: 392 all out in 114.4 overs (KL Rahul 81, AR Easwaran 117, Priyank Panchal 50) beat England Lions: 144 and 180 all out in 53.3 overs (Ben Duckett, Sam Billings 20; Mayank Markande 5/31, Jalaj Saxena 2/40, Navdeep Saini 1/25) by innings and 68 runs.

LEAVE A REPLY

Please enter your comment!
Please enter your name here

12 − six =