ರೋಹಿತ್ ಶರ್ಮಾ ನನ್ನೊಂದಿಗೆ ರೊಮ್ಯಾನ್ಸ್ ಮಾಡಿದ್ದ… ಕಿಸ್ ಕೊಟ್ಟಿದ್ದ..!

0

ಬೆಂಗಳೂರು, ಜನವರಿ 20: ಟೀಮ್ ಇಂಡಿಯಾದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಬದುಕಲ್ಲಿ ಹೊಸ ಸಂಭ್ರಮ ಮನೆ ಮಾಡಿದೆ. 

ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಹೆಣ್ಣು ಮಗುವಿನ ತಂದೆಯಾಗಿರುವ ರೋಹಿತ್ ಶರ್ಮಾಗೆ ಈಗ ಅವರ ಮಾಜಿ ಪ್ರೇಯಸಿ, ಆಂಗ್ಲೋ ಇಂಡಿಯನ್ ಮಾಡೆಲೆ ಕಂ ನಟಿ ಸೋಫಿಯಾ ಹಯಾತ್ ಶಾಕ್ ಕೊಟ್ಟಿದ್ದಾರೆ.

ಇಂಗ್ಲೆಂಡ್ ನ ಕ್ಲಬ್ ಒಂದರಲ್ಲಿ ಮೊದಲ ಬಾರಿ ಭೇಟಿಯಾದಾಗಲೇ ರೋಹಿತ್ ಶರ್ಮಾ ನನ್ನ ಜೊತೆ ರೊಮ್ಯಾನ್ಸ್ ಮಾಡಿದ್ದ ಎಂದು ಸಂದರ್ಶನವೊಂದರಲ್ಲಿ ಸೋಫಿಯಾ ಹೇಳಿಕೊಂಡಿದ್ದಾರೆ.

‘’ನನ್ನ ಮತ್ತು ರೋಹಿತ್ ಶರ್ಮಾನ ಮೊದಲ ಭೇಟಿ ಇಂಗ್ಲೆಂಡ್ ನ ಕ್ಲಬ್ ಒಂದರಲ್ಲಿ ನಡೆಯಿತು. ಸ್ನೇಹಿತರೊಬ್ಬರು ಶರ್ಮಾನನ್ನು ನನಗೆ ಪರಿಚಯಿಸಿದರು. ನಂತರ ಇಬ್ಬರೂ ಕೆಲ ಹೊತ್ತು ಮಾತನಾಡಿದೆವು. ಕೆಲ ಹೊತ್ತಿನ ನಂತರ ಆ ಕ್ಲಬ್ ನ ಬೇರೆ ಭಾಗಕ್ಕೆ ಹೋದೆವು. ಅಲ್ಲಿ ನಮ್ಮಬ್ಬರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಆ ಸಂದರ್ಭವನ್ನು ಬಳಸಿಕೊಂಡ ರೋಹಿತ್ ನನ್ನನ್ನು ಬರ ಸೆಳೆದು ಅಪ್ಪಿಕೊಂಡು ಕಿಸ್ ಮಾಡಿ ಬಿಟ್ಟ. ನಂತರ ಕ್ಲಬ್ ನಲ್ಲಿ ಇಬ್ಬರು ಡ್ಯಾನ್ಸ್ ಮಾಡಿದೆವು’’ ಎಂದು ಸೋಫಿಯಾ ಹಯಾತ್ ಹೇಳಿದ್ದಾರೆ.

ರೋಹಿತ್ ಶರ್ಮಾ ತಮ್ಮ ಮ್ಯಾನೇಜರ್ ರಿತಿಕಾ ಸಜ್ ದೇ ಅವರನ್ನು ಮದುವೆಯಾದ ಬೆನ್ನಲ್ಲೇ ರೋಹಿತೇ ಅವರನ್ನು ಸೋಫಿಯಾ ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿದ್ದರು. 

LEAVE A REPLY

Please enter your comment!
Please enter your name here

2 × one =