ವರ್ಕೌಟ್ ಆಯ್ತು ದ್ರಾವಿಡ್ ಬ್ಯಾಟಿಂಗ್ ಪಾಠ.. ಶತಕದತ್ತ ರಾಹುಲ್

0
KL Rahul PC: BCCI/ICC/Twitter

ವಯನಾಡ್, ಫೆಬ್ರವರಿ 8: ಫಾರ್ಮ್ ಕಳೆದುಕೊಂಡಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಕೊನೆಗೂ ಫಾರ್ಮ್ ಗೆ ಮರಳಿದ್ದಾರೆ. ಭಾರತ ‘ಎ’ ತಂಡದ ಪರ ಆಡುತ್ತಿರುವ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಶತಕದತ್ತ ದಾಪುಗಾಲಿಟ್ಟಿದ್ದಾರೆ.

ಪಂದ್ಯದ 2ನೇ ದಿನದಂತ್ಯಕ್ಕೆ ರಾಹುಲ್ 182 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ ಅಜೇಯ 88 ರನ್ ಗಳಿಸಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಫಲ್ಯ ಎದುರಿಸಿದ್ದ ರಾಹುಲ್ ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆಗೂ ಗುರಿಯಾಗಿದ್ದರು. ಬಿಸಿಸಿಐ ಅಮಾನತು ವಾಪಸ್ ಪಡೆದ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಿದ್ದರೂ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದ್ದರು.

ಆದರೆ ಸತತ ವೈಫಲ್ಯಗಳ ನಂತರ ಫಾರ್ಮ್ ಕಂಡುಕೊಳ್ಳುನಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ. ಪಂದ್ಯಕ್ಕೂ ಮೊದಲು ಕೋಚ್ ರಾಹುಲ್ ದ್ರಾವಿಡ್ ಅವರಿಂದ ಬ್ಯಾಟಿಂಗ್ ಪಾಠ ಹೇಳಿಸಿಕೊಂಡದ್ದು ಫಲಕೊಟ್ಟಂತಿದೆ.

Brief scores 

England Lions: 340 all out in 104.3 overs (Ben Ducket 80, Sam Hain 61; Navdeep Saini 5/79) Vs India A: 219/1 in 67 overs (KL Rahul 88 not out, Priyank Panchal 89 not out). 

LEAVE A REPLY

Please enter your comment!
Please enter your name here

4 × five =