ವಿಂಡೀಸ್ ವಿರುದ್ಧದ ಅಭ್ಯಾಸ ಪಂದ್ಯ: ಪ್ರಸಿದ್ಧ್ ಕೃಷ್ಣಗೆ ದಿಢೀರ್ ಕರೆ

0
PC: BCCI

ಬೆಂಗಳೂರು, ಸೆಪ್ಟೆಂಬರ್ 27: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಸೆಪ್ಟೆಂಬರ್ 29 ಮತ್ತು 30ರಂದು ವಡೋದರಲ್ಲಿ ನಡೆಯಲಿರುವ ಎರಡು ದಿನಗಳ ಅಭ್ಯಾಸ ಪಂದ್ಯಕ್ಕಾಗಿ ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಹಿಂದೆ ಆಯ್ಕೆ ಮಾಡಲಾಗಿದ್ದ ತಂಡದಲ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ಸ್ಥಾನ ನೀಡಿರಲಿಲ್ಲ. ಕರ್ನಾಟಕದಿಂದ ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೆ ಕರುಣ್ ನಾಯರ್‌ಗೆ ತಂಡದ ನಾಯಕತ್ವ ನೀಡಲಾಗಿತ್ತು. ಆದರೆ ಇದೀಗ ವಡೋದರದಲ್ಲಿರುವ ತಂಡವನ್ನು ಸೇರಿಕೊಳ್ಳುವಂತೆ ಪ್ರಸಿದ್ಧ್ ಕೃಷ್ಣ ಅವರಿಗೆ ಬಿಸಿಸಿಐ ಸೂಚನೆ ನೀಡಿದ್ದು, ಪ್ರಸಿದ್ಧ್ ಗುರುವಾರವೇ ವಡೋದರಗೆ ಪ್ರಯಾಣಿಸಿದ್ದಾರೆ.
ಹೀಗಾಗಿ ಸೆಪ್ಟೆಂಬರ್ 30ರಂದು ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ವಿದರ್ಭ ವಿರುದ್ಧದ ಪಂದ್ಯಕ್ಕೆ ಪ್ರಸಿದ್ಧ್ ಅಲಭ್ಯರಾಗಲಿದ್ದಾರೆ. ಈಗಾಗಲೇ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆಲುವಿನ ಮುಖ ಕಾಣಲು ವಿಫಲವಾಗಿರುವ ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ರೇಸ್‌ನಿಂದ ಹೊರ ಬಿದ್ದಿದೆ.

LEAVE A REPLY

Please enter your comment!
Please enter your name here

one × one =