ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್

0
Umesh Yadav. PC: BCCI

ಹೈದರಾಬಾದ್, ಅಕ್ಟೋಬರ್ 14: ವಿಶ್ವದ ನಂ.1 ಟೆಸ್ಟ್ ತಂಡ ಭಾರತ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ರಾಜೀವ್ ಗಾಂ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೂರನೇ ದಿನಗಳಲ್ಲಿ ಅಂತ್ಯಗೊಂಡ ದ್ವಿತೀಯ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 10 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ವೆಸ್ಟ್ ಇಂಡೀಸ್ ತಂಡದ 311 ರನ್‌ಗಳಿಗೆ ಉತ್ತರವಾಗಿ ಭಾರತ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 367 ರನ್‌ಗಳಿಗೆ ಆಲೌಔಗಿ 56 ರನ್‌ಗಳ ಮುನ್ನಡೆ ಪಡೆಯಿತು. ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ 127 ರನ್‌ಗಳಿಗೆ ಆಲೌಟಾಗಿ ಭಾರತಕ್ಕೆ 72 ರನ್‌ಗಳ ಗೆಲುವಿನ ಗುರಿ ನಿಗದಿ ಪಡಿಸಿತು.

ಸುಲಭ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 75 ರನ್ ಗಳಿಸಿ 10 ವಿಕೆಟ್‌ಗಳ ಭರ್ಜರಿ ಜಯ ದಾಖಿಲಿಸಿತು. ಇದು ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ತನ್ನ ಟೆಸ್ಟ್ ಇತಿಹಾಸದಲ್ಲೇ ಗಳಿಸಿದ 10 ವಿಕೆಟ್‌ಗಳ ಮೊದಲ ಗೆಲುವಾಗಿದೆ.

ಭಾನುವಾರ ಒಂದೇ ದಿನ 16 ವಿಕೆಟ್‌ಗಳು ಉರುಳಿದವು. ಪ್ರಥಮ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ಸ್ ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ಸ್ ಸಹಿತ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಉರುಳಿಸಿದ ವೇಗಿ ಉಮೇಶ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪೃಥ್ವಿ ಶಾ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Brief scores: West Indies: 311 & 127 all out in 46.1 overs (Sunil Ambris 38, Shai Hope 28; Umesh Yadav 4/45, Ravindra Jadeja 3/12, R Ashwin 2/24, Kuldeep Yadav 1/45) lost to India: 367 & 75/0 in 16.1 overs (KL Rahul 33 not out, Prithvi Shaw 33 not out) by 10 wickets.

 

LEAVE A REPLY

Please enter your comment!
Please enter your name here

19 − 13 =