ವಿಜಯ್ ಹಜಾರೆ: ಕರ್ನಾಟಕ ತಂಡಕ್ಕೆ ವಿನಯ್ ಸಾರಥ್ಯ

0
PC: Twitter

ಬೆಂಗಳೂರು, ಸೆಪ್ಟೆಂಬರ್ 14: ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ದಾವಣಗೆರೆ ಎಕ್ಸ್‌ಪ್ರೆಸ್ ಆರ್.ವಿನಯ್ ಕುಮಾರ್ ಮುನ್ನಡೆಸಲಿದ್ದಾರೆ.
ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ 15 ಸದಸ್ಯರ ಕರ್ನಾಟಕ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಕೆಎಸ್‌ಸಿಎ ಲೀಗ್, ಡಾ.ತಿಮ್ಮಪ್ಪಯ್ಯ ಸ್ಮಾರಕ ಅಖಿಲ ಭಾರತ ಕ್ರಿಕೆಟ್ ಟೂರ್ನಿ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಮಿಸ್ಟರಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿರುವ ಕಾರಣ ಕರ್ನಾಟಕ ತಂಡಕ್ಕೆ ಅವರ ಸೇವೆ ಲಭ್ಯವಿಲ್ಲ.
ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಸೆಪ್ಟೆಂಬರ್ 20ರಂದು ಮಹಾರಾಷ್ಟ್ರ ತಂಡವನ್ನುಎದುರಿಸುವ ಮೂಲಕ ಪ್ರಸಕ್ತ ದೇಶೀಯ ಕ್ರಿಕೆಟ್ ಋತುವನ್ನು ಆರಂಭಿಸಲಿದೆ.

ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡ
ಆರ್.ವಿನಯ್ ಕುಮಾರ್(ನಾಯಕ), ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಕರುಣ್ ನಾಯರ್, ಪವನ್ ದೇಶಪಾಂಡೆ, ಸಿ.ಎಂ ಗೌತಮ್(ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಕೆ.ಗೌತಮ್, ಜೆ.ಸುಚಿತ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಎಂ.ಜಿ ನವೀನ್, ಅಭಿಷೇಕ್ ರೆಡ್ಡಿ, ಶರತ್ ಬಿ.ಆರ್(ವಿಕೆಟ್ ಕೀಪರ್). ಕೋಚ್: ಯರೇ ಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್.

ವೇಳಾಪಟ್ಟಿ (ಎಲೈಟ್ ಗ್ರೂಪ್ ‘ಎ’)
ಸೆ.20: ಕರ್ನಾಟಕ-ಮಹಾರಾಷ್ಟ್ರ, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಳಗ್ಗೆ 9ಕ್ಕೆ
ಸೆ.21: ಕರ್ನಾಟಕ-ಮುಂಬೈ, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಳಗ್ಗೆ 9ಕ್ಕೆ
ಸೆ.24: ಕರ್ನಾಟಕ-ಗೋವಾ, ಜಸ್ಟ್ ಕ್ರಿಕೆಟ್ ಅಕಾಡೆಮಿ, ಬೆಳಗ್ಗೆ 9ಕ್ಕೆ
ಸೆ.26: ಕರ್ನಾಟಕ-ಬರೋಡಾ, ಜಸ್ಟ್ ಕ್ರಿಕೆಟ್ ಅಕಾಡೆಮಿ, ಬೆಳಗ್ಗೆ 9ಕ್ಕೆ
ಸೆ.30: ಕರ್ನಾಟಕ-ವಿದರ್ಭ, ಆಲೂರು(2), ಬೆಳಗ್ಗೆ 9ಕ್ಕೆ
ಅ.4: ಕರ್ನಾಟಕ-ರೈಲ್ವೇಸ್, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಳಗ್ಗೆ 9ಕ್ಕೆ
ಅ.6: ಕರ್ನಾಟಕ-ಹಿಮಾಚಲ ಪ್ರದೇಶ, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಳಗ್ಗೆ 9ಕ್ಕೆ
ಅ.8: ಕರ್ನಾಟಕ-ಪಂಜಾಬ್, ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಳಗ್ಗೆ 9ಕ್ಕೆ

LEAVE A REPLY

Please enter your comment!
Please enter your name here

12 + 7 =