ವಿಜಯ್ ಹಜಾರೆ : ಶ್ರೇಯಸ್, ರಹಾನೆ ಶತಕಗಳಿಗೆ ಬೆದರಿದ ಕರ್ನಾಟಕ, ಮುಂಬೈಗೆ ಜಯ

0
PC: Twitter

ಬೆಂಗಳೂರು, ಸೆಪ್ಟೆಂಬರ್ 21: ಮುಂಬೈ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್(110) ಮತ್ತು ನಾಯಕ ಅಜಿಂಕ್ಯ ರಹಾನೆ(148) ಅವರ ಶತಕಗಳ ಅಬ್ಬರಕ್ಕೆ ಕಂಗೆಟ್ಟ ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸತತ 2ನೇ ಸೋಲು ಕಂಡಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ 88 ರನ್‌ಗಳ ಸೋಲುಂಡಿತು. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಸೋತಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 362 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ನಾಯಕ ರಹಾನೆ 150 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 148 ರನ್ ಗಳಿಸಿದರೆ, ಅಬ್ಬರದ ಆಟವಾಡಿದ ಶ್ರೇಯಸ್ ಅಯ್ಯರ್ ಕೇವಲ 82 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಅಮೋಘ ಸಿಕ್ಸರ್‌ಗಳ ಸಹಿತ 110 ರನ್ ಸಿಡಿಸಿದರು.
ನಂತರ ಕಠಿಣ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 45 ಓವರ್‌ಗಳಲ್ಲಿ 274 ರನ್‌ಗಳಿಗೆ ಆಲೌಟಾಗಿ ಟೂರ್ನಿಯಲ್ಲಿ ಸತತ 2ನೇ ಸೋಲಿಗೆ ಗುರಿಯಾಯಿತು. ಮಯಾಂಕ್ ಅಗರ್ವಾಲ್ 48 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳ ಸಹಿತ 66 ರನ್ ಗಳಿಸಿದರೆ, ಕೆ.ಗೌತಮ್ 20 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳನ್ನೊಳಗೊಂಡ 38 ರನ್ ಹಾಗೂ ನಾಯಕ ವಿನಯ್ 36 ರನ್ ಗಳಿಸಿದರು. ಆದರೆ ಸಮರ್ಥ್(20), ಕರುಣ್ ನಾಯರ್(31), ಪವನ್ ದೇಶಪಾಂಡೆ(15), ಸಿ.ಎಂ ಗೌತಮ್(12), ಸ್ಟುವರ್ಟ್ ಬಿನ್ನಿ(1) ಅವರು ಎಡವಿದ್ದರಿಂದ ಕರ್ನಾಟಕ ಸೋಲು ಕಾಣುವಂತಾಯಿತು.
ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಸೋಮವಾರ ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ಗೋವಾ ತಂಡವನ್ನು ಎದುರಿಸಲಿದೆ.

Brief scores:
Mumbai: 362/5 in 50 overs (Ajinkya Rahane 148, Shreyas Iyer 110; R Vinay Kumar 1/76, A Mithun 1/81, Stuart Binny 1/50, K Gowtham 1/40).
Karnataka: 274 all out in 45 overs (Mayank Agarwal 66, K Goowtham 38, R Vinay Kumar 36, A Mithun 24; Shams Mulani 4/71, Shivam Dubey 2/48, Tushar Deshpande 2/68, Siddhesh Lad 1/4).

LEAVE A REPLY

Please enter your comment!
Please enter your name here

fifteen + 14 =