ವಿಜಯ್ ಹಜಾರೆ : ಶತಕ ವಂಚಿತ ಸಮರ್ಥ್, ಕರ್ನಾಟಕಕ್ಕೆ ಜಯ

0

ಬೆಂಗಳೂರು, ಅಕ್ಟೋಬರ್ 6: ಹಾಲಿ ಚಾಂಪಿಯನ್ ಕರ್ನಾಟಕ ತಂಡ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಲೈಟ್ ‘ಎ’ ಗುಂಪಿನ ತನ್ನ 7ನೇ ಪಂದ್ಯದಲ್ಲಿ ಕರ್ನಾಟಕ ತಂಡ, ಹಿಮಾಚಲ ಪ್ರದೇಶ ತಂಡವನ್ನು ವಿ.ಜಯದೇವನ್ ನಿಯಮ(ವಿಜೆಡಿ)ದ ಪ್ರಕಾರ 35 ರನ್‌ಗಳಿಂದ ಮಣಿಸಿತು. ಆದರೆ ನಾಕೌಟ್ ರೇಸ್‌ನಿಂದ ಈಗಾಗಲೇ ಹೊರ ಬಿದ್ದಿರುವ ಕರ್ನಾಟಕ ತಂಡಕ್ಕೆ ಈ ಪಂದ್ಯ ಔಪಚಾರಿಕವಾಗಿತ್ತು. ಮಳೆಯ ಕಾರಣ ಓವರ್‌ಗಳ ಸಂಖ್ಯೆಯನ್ನು 38ಕ್ಕೆ ಇಳಿಸಲಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 38 ಓವರ್‌ಗಳಲ್ಲಿ 8 ವಿಕೆಟ್‌ಗೆ 257 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಕರ್ನಾಟಕ ಪರ ಆರಂಭಿಕ ಬ್ಯಾಟ್ಸ್‌ಮನ್ ಆರ್.ಸಮರ್ಥ್ 97 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 98 ರನ್ ಗಳಿಸಿ ಶತಕ ವಂಚಿತರಾದರು. ನಾಯಕ ಮನೀಶ್ ಪಾಂಡೆ 43 ರನ್ ಕಲೆ ಹಾಕಿತು.
ನಂತರ ಹಿಮಾಚಲ ಪ್ರದೇಶ ಗುರಿ ಬೆನ್ನಟ್ಟುವ ವೇಳೆ ಮಳೆ ಸುರಿದಿದ್ದರಿಂದ 32 ಓವರ್‌ಗಳಲ್ಲಿ 198 ರನ್‌ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಯಿತು. ಆದರೆ ಪ್ರವಾಸಿ ತಂಡ 25.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ಯುವ ವೇಗಿ ಟಿ.ಪ್ರದೀಪ್(4/35) ಮತ್ತು ಆಲ್ರೌಂಡರ್ ಕೆ.ಗೌತಮ್ (4/26) ತಲಾ 4 ವಿಕೆಟ್ ಉರುಳಿಸಿದರು.
ಸೋಮವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ತಂಡವನ್ನು ಎದುರಿಸಲಿದೆ.

Brief scores
Karnataka: 257/8 in 38 overs (R Samarth 98, Manish Pandey 43, Anirudha Joshi 42; Rishi Dhawan 3/57, Prashant Chopra 2/20) beat Himachal Pradesh: 162 all out in 25.3 overs (Prashant Chopra 67, Ankush Bains 26; T Pradeep 4/35, K Gowtham 4/26) by 35 runs.

LEAVE A REPLY

Please enter your comment!
Please enter your name here

14 − two =