ವಿಜಯ್ ಹಜಾರೆ: ಹಾಲಿ ಚಾಂಪಿಯನ್ಸ್ ಕರ್ನಾಟಕಕ್ಕೆ ನಾಳೆ ಮಹಾರಾಷ್ಟ್ರ ಎದುರಾಳಿ

0
PC: Facebook

ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕ ತಂಡದ ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ ಋತು ಗುರುವಾರ ಆರಂಭವಾಗಲಿದ್ದು, ವಿಜಯ್ ಹಜಾರೆ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.
ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲೈಟ್ ‘ಎ’ ಗ್ರೂಪ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್ ಕರ್ನಾಟಕ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿ ಗೆದ್ದು ಬೀಗಿದ್ದ ಕರ್ನಾಟಕ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. 2013-14 ಹಾಗೂ 2014-15ನೇ ಸಾಲಿನಲ್ಲಿ ರಣಜಿ ಟ್ರೋಫಿ, ಇರಾನಿ ಕಪ್ ಜೊತೆಗೆ ಸತತ ಎರಡು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದ ಕರ್ನಾಟಕ ತಂಡ, ಕಳೆದ ಬಾರಿ ಕರುಣ್ ನಾಯರ್ ಅವರ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.
ಈ ಸಾಲಿನಲ್ಲಿ ಅನುಭವಿ ನಾಯಕ ಆರ್.ವಿನಯ್ ಕುಮಾರ್ ಅವರ ಸಾರಥ್ಯದಲ್ಲಿ ಕರ್ನಾಟಕ ಪ್ರಶಸ್ತಿ ಉಳಿಸಿಕೊಳ್ಳಲು ಸಜ್ಜಾಗಿದೆ. ಈಗಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯವನ್ನೂ ಆಡಿರುವ ರಾಜ್ಯ ತಂಡಕ್ಕೆ ತವರು ನೆಲದ ಲಾಭವಿದೆ.
ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಏಷ್ಯಾ ಕಪ್ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಇವರಿಬ್ಬರು ರಾಜ್ಯ ತಂಡಕ್ಕೆ ಲಭ್ಯರಿಲ್ಲ. ಹೀಗಾಗಿ ಬ್ಯಾಟಿಂಗ್‌ನಲ್ಲಿ ರನ್ ಮಷಿನ್ ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಉಪನಾಯಕ ಕರುಣ್ ನಾಯರ್, ಪವನ್ ದೇಶಪಾಂಡೆ, ಸಿ.ಎಂ ಗೌತಮ್, ಆಲ್‌ರೌಂಡರ್‌ಗಳಾದ ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಕೆ.ಗೌತಮ್ ತಂಡಕ್ಕೆ ನೆರವಾಗಲಿದ್ದಾರೆ.
ವೇಗದ ಬೌಲಿಂಗ್‌ನಲ್ಲಿ ನಾಯಕ ವಿನಯ್ ಕುಮಾರ್, ಪೀಣ್ಯ ಎಕ್ಸ್‌ಪ್ರೆಸ್ ಅಭಿಮನ್ಯು ಮಿಥುನ್, ಯುವ ವೇಗಿ ಪ್ರಸಿದ್ಧ್ ಕೃಷ್ಣ ಅವರ ಬಲ ತಂಡಕ್ಕಿದೆ.
ಮಹಾರಾಷ್ಟ್ರ ತಂಡ ಬುಧವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ತಂಡಗಳು
ಕರ್ನಾಟಕ: ಆರ್.ವಿನಯ್ ಕುಮಾರ್(ನಾಯಕ), ಆರ್.ಸಮರ್ಥ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪವನ್ ದೇಶಪಾಂಡೆ, ಸಿ.ಎಂ ಗೌತಮ್, ಸ್ಟುವರ್ಟ್ ಬಿನ್ನಿ, ಕೆ.ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಎಂ.ಜಿ ನವೀನ್, ಅಭಿಷೇಕ್ ರೆಡ್ಡಿ, ಬಿ.ಆರ್ ಶರತ್, ಜೆ.ಸುಚಿತ್.

ಮಹಾರಾಷ್ಟ್ರ: ರಾಹುಲ್ ತ್ರಿಪಾಠಿ, ಪ್ರಶಾಂತ್ ಕೋರೆ, ಅಂಕಿತ್ ಬಾವ್ನೆ, ಸತ್ಯಜೀತ್ ಬಚ್ಚವ್, ಮಂದಾರ್ ಭಂಡಾರಿ, ಸಮತ್ ಲ್ಲಾ, ರುತುರಾಜ್ ಗಾಯಕ್ವಾಡ್, ಸ್ವಪ್ನಿಲ್ ಗುಗಾಲೆ, ಅಥರ್ವ ಕಾಳೆ, ಶಮ್ಸುಜಾಮ ಕಾಜಿ, ರೋಹಿತ್ ಮೋಟ್ವಾನಿ, ಮುಕೇಶ್ ಚೌಧರಿ, ಶ್ರೀಕಾಂತ್ ಮುಂಢೆ, ಆಶಯ್ ಪಾಲ್ಕರ್, ಅನುಪಮ್ ಸಂಕ್ಲೇಚ, ಜೇ ಪಾಂಡೆ.

Match starts: 9 am IST
Venue: M.Chinnaswamy Stadium, Bengaluru.

LEAVE A REPLY

Please enter your comment!
Please enter your name here

eighteen + 15 =