ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಧ್ಯೆ ಬಾಂಧವ್ಯ ಬೆಸೆದ ಫುಟ್ಬಾಲ್

0
ಬೆಂಗಳೂರು, ಸೆಪ್ಟೆಂಬರ್ 4: ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಫುಟ್ಬಾಲ್ ಪಂದ್ಯವನ್ನು ಏರ್ಪಡಿಸುವ ಮೂಲಕ ಕ್ರಿಯೊ ವ್ಯಾಲಿ ಸ್ಕೂಲ್ ಆ್ ಫಿಲ್ಮ್ ಆ್ಯಂಡ್ ಟೆಲಿವಿಜನ್‌ನ ಫ್ರೆಶರ್ಸ್ ಡೇ ದಿನವನ್ನು ವಿನೂತನವಾಗಿ ಆಚರಿಸಲಾಯಿತು.
ಸಂಸ್ಥಾಪಕ ವರ್ಷದ ವಿದ್ಯಾರ್ಥಿಗಳ ತಂಡ, 2, 3 ಹಾಗೂ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ತಂಡಗಳು, ಶಿಕ್ಷಕರ ತಂಡದೊಂದಿಗೆ ಫುಟ್ಬಾಲ್ ಸವಿಯನ್ನು ಸವಿದವು.

ಪ್ರತಿ ತಂಡದಲ್ಲಿ ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರಿದ್ದರು. ಟೂರ್ನಿಯ ಹೆಚ್ಚಿನ ನಿಯಮಗಳು ಫಿಫಾ ನಿಯಮಕ್ಕೆ ಅನುಗುಣವಾಗಿದ್ದವು. ಆಡಲು ಅವಕಾಶ ಸಿಗದ ವಿದ್ಯಾರ್ಥಿಗಳು ಚಿಯರ್ ಲೀಡರ್ಸ್ ಪಾತ್ರ ನಿಭಾಯಿಸಿ ಸಂಭ್ರಮ ಪಟ್ಟರು.
ಇಂಟಿರಿಯನ್ ಡಿಸೈನ್ ‘ಬ್ಲೂ ತಂಡ’ ಚಾಂಪಿಯನ್ ಆದರೆ ‘ಗ್ರೇ ತಂಡ’ 2ನೇ ಸ್ಥಾನ ಪಡೆಯಿತು.

LEAVE A REPLY

Please enter your comment!
Please enter your name here

seventeen + 1 =