ವಿನೂ ಮಂಕಡ್ ಟ್ರೋಫಿ: ಅರ್ಜುನ್ ತೆಂಡೂಲ್ಕರ್ ಭರ್ಜರಿ ಬೌಲಿಂಗ್

0

ಸೂರತ್, ಅಕ್ಟೋಬರ್ 7: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ವಿನೂ ಮಂಕಡ್ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿದ್ದಾರೆ.
ಮುಂಬೈ ಪರ ಆಡುತ್ತಿರುವ ಎಡಗೈ ವೇಗದ ಬೌಲರ್ ಅರ್ಜುನ್, ಶನಿವಾರ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ 30 ರನ್ನಿತ್ತು 5 ವಿಕೆಟ್ ಪಡೆದಿದ್ದರು. ಅರ್ಜುನ್ ಅವರ ಬೌಲಿಂಗ್ ಪರಾಕ್ರಮದಿಂದ ಮುಂಬೈ ಈ ಪಂದ್ಯದಲ್ಲಿ 9 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ ಬಂಗಾಳ ವಿರುದ್ಧ 7 ವಿಕೆಟ್‌ಗಳ ಸುಲಭ ಗೆಲುವಿನೊಂದಿಗೆ ಸತತ 2ನೇ ಜಯ ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲೂ ಮಿಂಚಿದ ಅರ್ಜುನ್ ತೆಂಡೂಲ್ಕರ್ 28 ರನ್ನಿತ್ತು 3 ವಿಕೆಟ್ ಉರುಳಿಸಿದರು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿ ಅರ್ಜುನ್ 8 ವಿಕೆಟ್ ಕಬಳಿಸಿದ್ದಾರೆ. 19 ವರ್ಷದ ಅರ್ಜುನ್ ತೆಂಡೂಲ್ಕರ್ ಭಾರತದ 19 ವರ್ಷದೊಳಗಿನವರ ತಂಡದ ಪರ ಆಡಿದ್ದಾರೆ.

LEAVE A REPLY

Please enter your comment!
Please enter your name here

7 + one =