ವಿನೂ ಮಂಕಡ್ ಟ್ರೋಫಿ: ಕರ್ನಾಟಕದ ಕಿರಿಯರ ತಂಡಕ್ಕೆ ಶುಭಾಂಗ್ ಹೆಗ್ಡೆ ನಾಯಕ

0

ಬೆಂಗಳೂರು, ಅಕ್ಟೋಬರ್ 1: ಯುವ ಉದಯೋನ್ಮುಖ ಆಲ್ರೌಂಡರ್ ಶುಭಾಂಗ್ ಹೆಗ್ಡೆ, ಅಕ್ಟೋಬರ್ 5ರಿಂದ 24ರವರೆಗೆ ಸೂರತ್‌ನಲ್ಲಿ ನಡೆಯಲಿರುವ ವಿನೂ ಮಂಕಡ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
17 ವರ್ಷದ ಶುಭಾಂಗ್ ಇತ್ತೀಚೆಗಷ್ಟೇ ಲಖನೌದಲ್ಲಿ ನಡೆದ ಚತುಷ್ಕೋನ ಏಕದಿನ ಸರಣಿಯಲ್ಲಿ ಭಾರತದ 19 ವರ್ಷಗೊಳದಿನವರ ಬಿ ತಂಡದ ಪರ ಆಡಿದ್ದರು.

ಕರ್ನಾಟಕದ 19 ವರ್ಷದೊಳಗಿನವರ ತಂಡ
ಶುಭಾಂಗ್ ಹೆಗ್ಡೆ(ನಾಯಕ), ರೋಹನ್ ನಾಯಕರ್, ಶಿವಕುಮಾರ್ ಬಿ.ಯು., ಪ್ರಜ್ವಲ್ ಪವನ್, ಸಾಯ್ ಪ್ರಜ್ವಲ್ ರೆಡ್ಡಿ, ಲವ್‌ನಿತ್ ಸಿಸೋಡಿಯಾ, ತುಷಾರ್ ಸಿಂಗ್, ವೆಂಕಟೇಶ್ ಎಂ., ಅಮಾನ್ ಖಾನ್, ಸಂಟೋಕ್ ಸಿಂಗ್, ಉತ್ತಮ್ ಗೌಡ, ಕುಮಾರ್ ಎಲ್.ಆರ್., ಚಿನ್ಮಯ್ ಎನ್. ಅಮ್ಮನಾಗಿ, ಅಕಿಬ್ ಜಾವೆದ್, ಕೃತಿಕ್ ಕೃಷ್ಣ(ವಿಕೆಟ್ ಕೀಪರ್) ; ಕೋಚ್ : ದೀಪಕ್ ಚೌಗುಲೆ, ಬೌಲಿಂಗ್ ಕೋಚ್ : ಜಿ.ಚೈತ್ರ, ಮ್ಯಾನೇಜರ್: ಎ.ಆರ್ ಮಹೇಶ್; ಫಿಸಿಯೊ: ಮಂಜುನಾಥ್ ಟಿ., ವಿಡಿಯೊ ವಿಶ್ಲೇಷಕ: ಕಿರಣ್ ಕುಡ್ತಾರ್ಕರ್, ಟ್ರೈನರ್: ಕಿರಣ್ ಎ.