ವಿಶ್ವಕಪ್ ಹಾಕಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

0
PC: Hockey India

ಭುವನೇಶ್ವರ, ಡಿಸೆಂಬರ್ 8: ಆತಿಥೇಯ ಭಾರತ ತಂಡ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಕೆನಡಾ ತಂಡವನ್ನು 5-1 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿ ಅಂತಿಮ 8ರ ಘಟ್ಟ ಪ್ರವೇಶಿಸಿತು.

ಪಂದ್ಯದ ಮೊದಲ ಮೂರು ಕ್ವಾರ್ಟರ್ ಗಳಲ್ಲಿ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಪಂದ್ಯ ಬಹುತೇಕ ಡ್ರಾದತ್ತ ವಾಲಿತ್ತು. ಆದರೆ ಅಂತಿಮ ಕ್ವಾರ್ಟರ್ ನಲ್ಲಿ ಅಮೋಘ ಪ್ರದರ್ಶನವಿತ್ತ ಭಾರತ 4 ಗೋಲುಗಳನ್ನು ಗಳಿಸಿ ಅಂತಿಮವಾಗಿ 5-1ರಲ್ಲಿ ಭರ್ಜರಿ ಜಯ ದಾಖಲಿಸಿತು.

ಭಾರತ ಪರ ಹರ್ಮನ್ ಪ್ರೀತ್ ಸಿಂಗ್(12ನೇ ನಿಮಿಷ), ಚಿಂಗ್ಲೆನ್ಸೇನಾ ಸಿಂಗ್(46ನೇ ನಿಮಿಷ), ಲಲಿತ್ ಉಪಾಧ್ಯಾಯ (47, 57ನೇ ನಿಮಿಷ) ಮತ್ತು ಲೋಕಲ್ ಹೀರೊ ಅಮಿತ್ ರೋಹಿದಾಸ್ (51ನೇ ನಿಮಿಷ) ಗೋಲು ಗಳಿಸಿದರು.

ಭಾರತ ತಂಡ 38 ವರ್ಷಗಳಿಂದ ಒಲಿಂಪಿಕ್ಸ್ ಅಥವಾ ವಿಶ್ವಕಪ್ ಟೂರ್ನಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿಲ್ಲ. ಆದರೆ ಈ ಬಾರಿ ತವರಿನಲ್ಲಿ ಆಡುತ್ತಿರುವ ಭಾರತ ಹಾಕಿ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

LEAVE A REPLY

Please enter your comment!
Please enter your name here

nineteen + 6 =