ವೀರ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರಲು ಸಿದ್ಧ ಎಂದ ಸೆಹ್ವಾಗ್

0

ಬೆಂಗಳೂರು, ಫೆಬ್ರವರಿ 16: ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ಸ್ಫೋಟಕ್ಕೆ ಬಲಿಯಾದ 49 CRPF ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್ ‘’ವೀರಮರಣಕ್ಕೆ ತುತ್ತಾದ ಯೋಧರಿಗೆ ನಾವೇನೇ ಮಾಡಿದರೂ ಕಡಿಮೆಯೇ. ಆದರೆ ನನ್ನ ಸೆಹ್ವಾಗ್ ಇಂಟರ್ ನ್ಯಾಷನಲ್ ಸ್ಕೂಲ್ ಮೂಲಕ ಮಡಿದ ಎಲ್ಲಾ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧ’’ ಎಂದಿದ್ದಾರೆ.

ಸೆಹ್ವಾಗ್ ಹರ್ಯಾಣದ ಜಜ್ಜಾರ್ ಎಂಬಲ್ಲಿ ಸೆಹ್ವಾಗ್ ಇಂಟರ್ ನ್ಯಾಷನಲ್ ವಸತಿ ಶಾಲೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

two + 9 =