ವೀಲ್‌ಚೇರ್ ಕ್ರಿಕೆಟ್: ಭಾರತ ತಂಡಕ್ಕೆ ಇಬ್ಬರು ಬೆಂಗಳೂರಿಗರು ಆಯ್ಕೆ

0
PC: facebook
ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರಿನ ಇಬ್ಬರು ವಿಕಲಾಂಗಚೇತನ ಕ್ರಿಕೆಟ್ ಆಟಗಾರರು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ದ್ವಿಪಕ್ಷೀಯ ವೀಲ್‌ಚೇರ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಸಲಿದ್ದಾರೆ.
ಈ ಸರಣಿ ಸೆಪ್ಟೆಂಬರ್ 17ರಿಂದ 22ರವರೆಗೆ ದುಬೈನಲ್ಲಿ ಆರಂಭವಾಗಲಿದೆ.
ಶಿವಪ್ರಸಾದ್ ಎಸ್. ಮತ್ತು ತಿಪ್ಪೇಸ್ವಾಮಿ ಮಡಿವಾಳ್ ಅವರನ್ನು ಈ ಸರಣಿಗೆ ಭಾರತೀಯ ವೀಲ್‌ಚೇರ್ ಕ್ರಿಕೆಟ್(ಡಬ್ಲ್ಯುಸಿಐ) ಭಾರತ ತಂಡಕ್ಕೆ ಆಯ್ಕೆ ಮಾಡಿದೆ.
PC: facebook
32 ವರ್ಷದ ಶಿವಪ್ರಸಾದ್ ಬಾಲ್ಯದಲ್ಲಿ ಪೋಲಿಯೊಗೆ ತುತ್ತಾಗಿ ಶೇಕಡ 80ರಷ್ಟು ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ. ಇವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
30 ವರ್ಷದ ತಿಪ್ಪೇಸ್ವಾಮಿ ಮಡಿವಾಳ್ ಅವರು ಕಾಲಿನ ಶಸಚಿಕಿತ್ಸೆಯಲ್ಲಾದ ಲೋಪದಿಂದಾಗಿ ಅಂಕವೈಕಲ್ಯ ಹೊಂದುವಂತಾಗಿದೆ.
ಶಿವಪ್ರಸಾದ್ ಅವರು ತಮ್ಮ ಸ್ನೇಹಿತರ ನೆರವಿನಿಂದ 2016ರಲ್ಲಿ ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪಿಸಿದ್ದು, ಈ ಮೂಲಕ ದೇಶದ ವಿಕಲಾಂಕಚೇತನ ಅಥ್ಲೀಟ್‌ಗಳಿಗೆ ನೆರವಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here

1 + 16 =