ವೆಟ್ಟೋರಿಗೆ ಕೊಕ್, RCBಗೆ ಬರಲಿದ್ದಾರೆ ಹೊಸ ಕೋಚ್!

0

ಬೆಂಗಳೂರು: 11 ವರ್ಷಗಳಿಂದ ಐಪಿಎಲ್ ನಲ್ಲಿ ಆಡಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಹೀಗಾಗಿ ರಾಯಲ್ ಚಾಲೆಂಜರ್ಸ್ ಮ್ಯಾನೇಜ್ಮೆಂಟ್ ತಂಡದ ಪ್ರಧಾನ ತರಬೇತುದಾರನ ಬದಲಾವಣೆಗೆ ಮುಂದಾಗಿದೆ. ಈಗಿರುವ ಕೋಚ್ ಡೇನಿಯೆಲ್ ವೆಟ್ಟೋರಿ ಅವರಿಗೆ ಕೊಕ್ ನೀಡಿ ಹೊಸ ಕೋಚ್ ನೇಮಕ ಮಾಡಲು ರಾಯಲ್ ಚಾಲೆಂಜರ್ಸ್ ನಿರ್ಧರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಅವರಂತಹ ದೊಡ್ಡ ಆಟಗಾರರಿದ್ದರೂ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಈ ವರ್ಷ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಲೂ ಸಾಧ್ಯವಾಗಿರಲಿಲ್ಲ.
ಹೀಗಾಗಿ ಹೆಡ್ ಕೋಚ್ ಆಗಿರುವ ನ್ಯೂಜಿಲೆಂಡ್ ನ ವೆಟ್ಟೋರಿ, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿರುವ ಆಸ್ಟ್ರೇಲಿಯಾದ ಟ್ರೆಂಟ್ ವುಡ್ ಹಿಲ್, ಬೌಲಿಂಗ್ ಕೋಚ್ ಆಗಿರುವ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಮೆಕ್ ಡೊನಾಲ್ಡ್ ಅವರನ್ನು ಬದಲಿಸಲು ರಾಯಲ್ ಚಾಲೆಂಜರ್ಸ್ ನಿರ್ಧರಿಸಿದೆ.
ಬೌಲಿಂಗ್ ಮೆಂಟರ್ ಆಗಿರುವ ಟೀಮ್ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ತಮ್ಮ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ನೆಹ್ರಾ ಕಳೆದ ವರ್ಷ ಬೌಲಿಂಗ್ ಮೆಂಟರ್ ಆಗಿ ನೇಮಕಗೊಂಡಿದ್ದರು.

LEAVE A REPLY

Please enter your comment!
Please enter your name here

thirteen + one =