ವೈದ್ಯರುಗಳಿಗಾಗಿಯೇ ಆಯೋಜನೆಗೊಂಡ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾವಳಿ

0
PC: Pixabay

ಬೆಂಗಳೂರು, ಅಕ್ಟೋಬರ್ ೩೦: ಸಾಮಾನ್ಯವಾಗಿ ಟೆಲಿವಿಜನ್, ಸಿನಿಮಾ ನಟರು, ನಾನಾ ವೃತ್ತಿಯಲ್ಲಿರುವವರು ಆಗಾಗ ವೃತ್ತಿಪರ ಕ್ರೀಡೆಗಳಲ್ಲಿ ಭಾಗವಹಿಸುವುದನ್ನ ನೋಡಿರುತ್ತೇವೆ. ಆದರೆ ಮೊದಲ ಬಾರಿಗೆ ನಗರದ ವೈದ್ಯರುಗಳು ಮೈಕ್ರೋ ಡಾಕ್ಟರ್ಸ್ ಕಪ್ ಎಂಬ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಈ ವೃತ್ತಿಪರ ಬ್ಯಾಡ್ಮಿಂಟನ್ ಟೂರ್ನಿಯು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನ ಅಂಕಣಗಳಲ್ಲಿ ನವೆಂಬರ್ 01ರಿಂದ ಆಯೋಜಿಸಲಾಗಿದ್ದು, ವೈದ್ಯರ ನಡುವೆ ಗೆಲುವಿಗಾಗಿ ಜಿದ್ದಾಜಿದ್ದಿ ನಡೆಯಲಿದೆ. ದೇಶದಲ್ಲೇ ವೈದ್ಯರಿಗಾಗಿ ಆಯೋಜಿಸಲಾದ ಪ್ರಥಮ ಬ್ಯಾಡ್ಮಿಂಟನ್ ಟೂರ್ನಿ ಇದಾಗಿದೆ.

ಈಗಾಗಲೇ ಗೆಲುವಿಗಾಗಿ ಸಾಕಷ್ಟು ತಯಾರಿ ನಡೆಸಿರುವ ನೂರಾರು ವೈದ್ಯರು ನಿಯಮಿತ ಅಭ್ಯಾಸ ಆರಂಭಿಸಿದ್ದಾರೆ. ಇದರಿಂದಾಗಿಯೇ ಈ ಪ್ರತಿಷ್ಠಿತ ಪಂದ್ಯಾವಳಿಯನ್ನ ವೈದ್ಯ ಸಮೂಹ ಸಾಕಷ್ಟು ಗಂಭೀರವಾಗಿ ತೆಗೆದುಕೊಂಡಿರುವುದು ಅವರ ಈ ತಯಾರಿ ನೋಡಿದರೆ ತಿಳಿಯುತ್ತದೆ. ದೆಕಾ ಇವೆಂಟ್ಸ್ ಸಿಇಓ ಅಬಂತಿಕಾ ದೆಕಾ ಈ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ. ಅಬಂತಿಕಾ ದೇಕಾ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ. ಸಧ್ಯ ದೇಶದ ಜೂನಿಯರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನೂಪ್ ಶ್ರೀಧರ್ (ಅರ್ಜುನ್ ಪ್ರಶಸ್ತಿ ವಿಜೇತ&ಒಲಂಪಿಯನ್) ಮತ್ತು ಡಾ ದಿಲೀಪ ಸುರಾನ (ಸಿಎಂಡಿ, ಮೈಕ್ರೋ ಲ್ಯಾಬ್ಸ್ ಲಿ.) ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ದೆಕಾ ಇವೆಂಟ್ಸ್‍ನ ಸಿಇಓ ಅಬಂತಿಕಾ ದೆಕಾ ಮಾತನಾಡಿ “ಸಾಕಷ್ಟು ಕುತೂಹಲ ಕೆರಳಿಸುವ ಬ್ಯಾಡ್ಮಿಂಟನ್ ಪಂದ್ಯವು ಜನಪ್ರಿಯ ಕ್ರೀಡೆಯಾಗಿದೆ. ಈ ಕಾರಣಕ್ಕೆ ವೈದ್ಯರುಗಳ ಆರೋಗ್ಯ ಮತ್ತು ದೈಹಿಕ ಸದೃಡತೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಕ್ರೋ ಲ್ಯಾಬ್ಸ್ ಈ ಬ್ಯಾಡ್ಮಿಂಟನ್ ಟೂರ್ನಿಯನ್ನ ಆಯೋಜಿಸಲು ಉತ್ಸುಕವಾಗಿದೆ. ನಮ್ಮ ಉದ್ದೇಶವೇ ವೈದ್ಯರುಗಳನ್ನ ಈ ಪಂದ್ಯಾವಳಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ “ಆರೋಗ್ಯವಂತ ವೈದ್ಯರು-ಆರೋಗ್ಯವಂತ ಸಮಾಜ” ಎಂಬ ಸಂದೇಶವನ್ನ ಸಾರುವುದಾಗಿದೆ”, ಎಂದರು. ಭವಿಷ್ಯದಲ್ಲಿ ಬೇರೆ ಬೇರೆ ನಗರಗಳಲ್ಲಿಯೂ ವೈದ್ಯರುಗಳಿಗಾಗಿ ಬ್ಯಾಡ್ಮಿಂಟನ್ ಟೂರ್ನಿಯನ್ನ ಆಯೋಜಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

3 − three =