ಶಟ್ಲರ್ ಸೈನಾ ನೆಹ್ವಾಲ್‌ಗೆ ಈಗ ಗಂಡನೇ ಕೋಚ್..!

0
PC: Saina/Twitter

ಬೆಂಗಳೂರು, ಜನವರಿ 17: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬಿಡಬ್ಲ್ಯುಎಫ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ಹಾಂಕಾಂಗ್ ಆಟಗಾರ್ತಿ ಪ್ಯು ಯಿನ್ ಯಿಪ್ ವಿರುದ್ಧ 21-14, 21-16 ಅಂತರದ ನೇರ ಗೇಮ್ ಗಳಿಂದ ಗೆಲುವು ದಾಖಲಿಸಿದರು. ಈ ಟೂರ್ನಿಯಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ವಿಶೇಷ ಅಂದರೆ ಸೈನಾ ನೆಹ್ವಾಹ್ ಅವರಿಗೆ ಈಗ ಗಂಡ ಪರುಪಳ್ಳಿ ಕಶ್ಯಪ್ ಅವರೇ ಕೋಚ್. ಖ್ಯಾತ ಶಟ್ಲರ್ ಕಶ್ಯಪ್ ಡಿಸೆಂರ್ 16ರಂದು ಸೈನಾ ನೆಹ್ವಾಲ್ ಜೊತೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಅಂದ ಹಾಗೆ ಪರುಪಳ್ಳಿ ಕಶ್ಯಪ್ ಕೂಡ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here

4 × 5 =