ಶತಕ ಜಸ್ಟ್ ಮಿಸ್.. ಮೈಸೂರಿನಲ್ಲೂ ರಾಹುಲ್‌ಗೆ ಒಲಿಯಲಿಲ್ಲ ಶತಕ..!

0
PC: Twitter

ಮೈಸೂರು, ಫೆಬ್ರವರಿ 13: ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 2ನೇ ಬಾರಿ ಶತಕ ವಂಚಿತರಾಗಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ರಾಹುಲ್ 81 ರನ್ನಿಗೆ ಔಟಾದರು. ಭಾರತ ‘ಎ’ ತಂಡದ ನಾಯಕರೂ ಆಗಿರುವ ರಾಹುಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಂಗಾಳ ಬ್ಯಾಟ್ಸ್ ಮನ್ ಅಭಿಮನ್ಯು ಈಶ್ವರನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ಮೊದಲ ವಿಕೆಟ್ ಗೆ ಭರ್ಜರಿ 179 ರನ್ ಗಳ ಜೊತೆಯಾಟವಾಡಿದರು. ಈಶ್ವರನ್ ಶತಕ(117) ಬಾರಿಸಿದರೆ, ರಾಹುಲ್ ಕೇವಲ 19 ರನ್ ಗಳಿಂದ ಶತಕ ವಂಚಿತರಾದರು. ತಮ್ಮ ಹಳೆಯ ಲಯಕ್ಕೆ ಮರಳಿರುವ ರಾಹುಲ್ 166 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ ತಾಳ್ಮೆಯ 81 ರನ್ ಗಳಿಸಿದರು.

ಕೇರಳದ ವಯನಾಡ್ ನಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 89 ರನ್ನಿಗೆ ಔಟಾಗಿದ್ದ ರಾಹುಲ್ ಅಲ್ಲೂ ಶತಕ ವಂಚಿತರಾಗಿದ್ದರು.

ದಿನದಂತ್ಯಕ್ಕೆ ಭಾರತ ‘ಎ’ ತಂಡ 3 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿದ್ದು, ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್ ಮನ್ ಕರುಣ್ ನಾಯರ್ 14 ರನ್ ಗಳೊಂದಿಗೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Brief scores

India A: 282/3 in 84.5 overs (KL Rahul 81, A Eshwaran 117, Priyank Panchal 50; ZJ Chappell 1/32) Vs England Lions.

LEAVE A REPLY

Please enter your comment!
Please enter your name here

eighteen − eighteen =