ಶಿವಣ್ಣನ ಡ್ಯಾನ್ಸ್‌ಗೆ ಆಸೀಸ್ ಲೆಜೆಂಡ್ ಆ್ಯಡಂ ಗಿಲ್‌ಕ್ರಿಸ್ಟ್ ಫಿದಾ!

0
ಬೆಂಗಳೂರು, ಸೆಪ್ಟೆಂಬರ್ 10: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕನ್ನಡ ಚಲನಚಿತ್ರ ಕಪ್(ಕೆಸಿಸಿ)-2 ಟೂರ್ನಿಯಲ್ಲಿ ವಿಜಯನಗರ ಪೇಟ್ರಿಯೆಟ್ಸ್ ತಂಡದ ಪರ ಆಡಿದ್ದರು. ಶನಿವಾರ ಮತ್ತು ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹಾಗೂ ಸಿನಿ ಪ್ರಿಯರು ಗಿಲ್ಲಿ ಮತ್ತು ಶಿವಣ್ಣನನ್ನು ಒಂದೇ ತಂಡದಲ್ಲಿ ನೋಡಿ ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಶಿವಣ್ಣ ಅವರ ಎನರ್ಜಿ ಕಂಡು ಸ್ವತಃ ಗಿಲ್‌ಕ್ರಿಸ್ಟ್ ಅವರೇ ಅಚ್ಚರಿ ಪಟ್ಟಿದ್ದಾರೆ. 56ರ ಹರೆಯದಲ್ಲೂ ಯುವಕರನ್ನೂ ನಾಚಿಸುವಂತೆ ಮೈದಾನದಲ್ಲಿ ಡ್ಯಾನ್ಸ್ ಮಾಡುತ್ತಾ ಆಟಗಾರರನ್ನು, ಪ್ರೇಕ್ಷಕರನ್ನು ಹುರಿದುಂಬಿಸುತ್ತಿದ್ದ ಶಿವರಾಜ್‌ಕುಮಾರ್ ಅವರ ಎನರ್ಜಿಯನ್ನು ಕಂಡು ಗಿಲ್‌ಕ್ರಿಸ್ಟ್ ಮೂಕವಿಸ್ಮಿತರಾದರು. ಶಿವಣ್ಣ ಡ್ಯಾನ್ಸ್ ಮಾಡುತ್ತಿದ್ದುದನ್ನು ನೋಡಿದ ಗಿಲ್ಲಿ, ‘ಅವರ ವಯಸ್ಸೆಷ್ಟು’ ಎಂದು ಪಕ್ಕದಲ್ಲಿದ್ದವರನ್ನು ಕೇಳಿದರು. ಶಿವಣ್ಣ ಅವರ ವಯಸ್ಸು 56 ಎಂಬುದನ್ನು ಕೇಳಿದ ಗಿಲ್ಲಿ ಅಚ್ಚರಿಪಟ್ಟರು. ಅಲ್ಲದೆ ಶಿವರಾಜ್ ಕುಮಾರ್ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಫಿಯನ್ನು ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿ ಅದ್ಭುತ ನಾಯಕ ಎಂದು ಬರೆದಿದ್ದಾರೆ. ಕರುನಾಡ ಚಕ್ರವರ್ತಿಯ ಬಗ್ಗೆ ಆಸೀಸ್ ಲೆಜೆಂಡ್ ಆಡಿರುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

LEAVE A REPLY

Please enter your comment!
Please enter your name here

eighteen − eighteen =