ಶುಭಮನ್ ಗಿಲ್’ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನಿರಾಕರಿಸಿದ್ದೇಕೆ..?

0

ಮುಂಬೈ, ಜುಲೈ 22: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಗಳಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಯುವ ಪ್ರತಿಭಾವಂತ ಬ್ಯಾಟ್ಸ್ಮನ್ ಶುಭಮನ್ ಗಿಲ್ ಅವರಿಗೆ ಮೂರೂ ತಂಡಗಳಲ್ಲಿ ಅವಕಾಶ ನಿರಾಕರಿಸಲಿದೆ.

ಸತತವಾಗಿ ವೈಫಲ್ಯ ಎದುರಿಸುತ್ತಿರುವ ಕೇದಾರ್ ಜಾಧವ್ ಅವರಿಗೆ ಏಕದಿನ ತಂಡದಲ್ಲಿ ಮತ್ತೆ ಸ್ಥಾನ ನೀಡಿರುವುದು ಕ್ರಿಕೆಟ್ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. 2023ರ ವಿಶ್ವಕಪ್ ಟೂರ್ನಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ತಂಡವನ್ನು ಈಗಿನಿಂದಲೇ ಸಜ್ಜುಗೊಳಿಸಬೇಕಿದ್ದು, 34 ವರ್ಷದ ಕೇದಾರ್ ಜಾಧವ್ ಅವರಿಗೆ ಅವಕಾಶ ನೀಡಿರುವುದು ಎಷ್ಟು ಸರಿ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದ ಕೇದಾರ್ ಜಾಧವ್ 6 ಪಂದ್ಯಗಳಿಂದ ಕೇವಲ 80 ರನ್ ಗಳಿಸಿದ್ದರು. ಮತ್ತೊಂದೆಡೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಶುಭಮನ್ ಗಿಲ್, 4 ಪಂದ್ಯಗಳಲ್ಲಿ 3 ಅರ್ಧಶತಕಗಳ ಸಹಿತ 218 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

https://twitter.com/RealShubmanGill/status/1153159170922651648

ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತರಾಗಿರುವ 19 ವರ್ಷದ ಶುಭಮನ್ ಗಿಲ್ 9 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 77.78ರ ಸರಾಸರಿಯಲ್ಲಿ 3 ಶತಕಗಳು ಮತ್ತು 7 ಅರ್ಧಶತಕಗಳ ಸಹಿತ 1089 ರನ್ ಗಳಿಸಿದ್ದಾರೆ. 47 ಲಿಸ್ಟ್ ಪಂದ್ಯಗಳನ್ನಾಡಿರುವ ಗಿಲ್ 47.36ರ ಸರಾಸರಿಯಲ್ಲಿ 5 ಶತಕಗಳು ಮತ್ತು 10 ಅರ್ಧಶತಕಗಳ ಸಹಿತ 1942 ರನ್ ಕಲೆ ಹಾಕಿದ್ದಾರೆ.

LEAVE A REPLY

Please enter your comment!
Please enter your name here

20 − 16 =