ವಿನೂ ಮಂಕಡ್ ಟ್ರೋಫಿ: ಶುಭಾಂಗ್ ಅಮೋಘ ಬೌಲಿಂಗ್, ಕರ್ನಾಟಕದ ಕಿರಿಯರಿಗೆ ಜಯ

0

ಸೂರತ್, ಅಕ್ಟೋಬರ್ 7: ನಾಯಕ ಶುಭಾಂಗ್ ಹೆಗ್ಡೆ(4/39), ವಿಕೆಟ್ ಕೀಪರ್ ಲವ್‌ನಿತ್ ಸಿಸೋಡಿಯಾ(81) ಮತ್ತು ಪ್ರಜ್ವಲ್ ಪವನ್(66) ಅವರ ಅಮೋಘ ಆಟದ ನೆರೆವನಿಂದ ಕರ್ನಾಟಕ ತಂಡ, ವಿನೂ ಮಂಕಡ್ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿದೆ.
ಇಲ್ಲಿನ ಲಾಲ್‌ಭಾಯ್ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಬಂಗಾಳ ತಂಡವನ್ನು 8 ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 49.4 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟಾಯಿತು. ಲವ್‌ನಿತ್ ಸಿಸೋಡಿಯಾ 86 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರೆ, ಪ್ರಜ್ವಲ್ ಪವನ್ 76 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನೊಳಗೊಂಡ 66 ರನ್ ಗಳಿಸಿದರು.
ನಂತರ ಗುರಿ ಬೆನ್ನಟ್ಟಿದ ಬಂಗಾಳ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 243 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ನಾಯಕ ಶುಭಾಂಗ್ ಹೆಗ್ಡೆ 10 ಓವರ್‌ಗಳಲ್ಲಿ 39 ರನ್ನಿತ್ತು 4 ವಿಕೆಟ್ ಉರುಳಿಸಿದರೆ, ವೆಂಕಟೇಶ್ ಎಂ. 58 ರನ್ನಿಗೆ 3 ವಿಕೆಟ್ ಪಡೆದರು.

Brief score
Karnataka U-19s: 251 all out in 49.4 overs (Lavnith Sisodia 81, Prajwal Pawan 66; Karan Lal 3/37) beat Bengal U-19s: 243/9 in 50 overs (Ankit Shukla 69, Ankit 31; Shubhang Hegde 4/39, Venkatesh M 3/58) by 8 runs.

LEAVE A REPLY

Please enter your comment!
Please enter your name here

eighteen − three =