ಸಮುದ್ರ ತಟದಲ್ಲಿ ಮಗಳ ಕಾಲನ್ನು ಮರಳಿನಿಂದ ಮುಚ್ಚಿದ ಧೋನಿ..!

0
PC: Twitter

ಬೆಂಗಳೂರು, ಜನವರಿ 1: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ಸದ್ಯ ಬಿಡುವು ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಕಾಂಗರೂ ನಾಡಿಗೆ ಪ್ರಯಾಣಿಸಬೇಕಿರುವ ಮಾಹಿ, ಅದಕ್ಕೂ ಮೊದಲು ಕುಟುಂಬದೊಂದಿಗೆ ಬಿಂದಾಸ್ ಆಗಿ ಕಾಲ ಕಳೆದಿದ್ದಾರೆ.
ಪತ್ನಿ ಸಾಕ್ಷಿ ಹಾಗೂ ಮಗಳು ಜೀವಾ ಜೊತೆ ಧೋನಿ ಸಮುದ್ರ ತೀರವೊಂದರಲ್ಲಿ ಕಾಲ ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಮರಳಿನಲ್ಲಿ ಮಗಳು ಜೀವಾ ಕಾಲುಗಳನ್ನು ಮುಚ್ಚುತ್ತಿರುವ ದೃಶ್ಯವನ್ನು ತಮ್ಮ ಇನ್ಸ್ ಟಾಗ್ರಾಂ ಖಾತೆಯಲ್ಲಿ ಪ್ರಕಟಸಿದ್ದಾರೆ. ಸ್ವತಃ ಧೋನಿ ಅವರೇ ಮರಳಿನಲ್ಲಿ ಸಣ್ಣ ಹೊಂಡ ತೋಡಿ, ಅದಕ್ಕೆ ಮಗಳನ್ನು ಇಳಿಸಿ ಕಾಲುಗಳನ್ನು ಮರಳಿನಿಂದ ಮುಚ್ಚಿದ್ದಾರೆ. ಅಪ್ಪ-ಮಗಳ ಈ ಸುಂದರ ದೃಶ್ಯ ಸಾಕಷ್ಟು ಮುದ್ದು ಮುದ್ದಾಗಿದೆ.

LEAVE A REPLY

Please enter your comment!
Please enter your name here

eighteen − eight =