ಟಿಮ್ ಪೇನ್ ಮಕ್ಕಳಿಗೆ ಪಂತ್ ಬೇಬಿ ಸಿಟ್ಟರ್… ಸವಾಲು ಸ್ವೀಕರಿಸಿದ ರಿಷಭ್..!

0

ಸಿಡ್ನಿ, ಜನವರಿ 1: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಸ್ಟ್ರೇಲಿಯಾ ವಿಕೆಟ್ ಕೀಪರ್ ಟಿಮ್ ಪೇಯ್ನ್ ಮಧ್ಯೆ ನಡೆಯುತ್ತಿರುವ ಸ್ಲೆಡ್ಜಿಂಗ್ ಗೊತ್ತೇ ಇದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇಬ್ಬರ ನಡುವಿನ ಮಾತಿನ ಸಮರ ತಾರಕಕ್ಕೇರಿತ್ತು. ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಟಿಮ್ ಪೇಯ್ನ್ ‘’ ಎಂಎಸ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ವಾಪಸ್ ಆಗಿದ್ದು, ಟೆಸ್ಟ್ ಸರಣಿ ಮುಗಿದ ಬಳಿಕ ಆಸೀಸ್ ಬಿಗ್ ಬ್ಯಾಶ್ ಲೀಗ್ ಆಡು. ನಮಗೊಬ್ಬ ಬ್ಯಾಟ್ಸ್ ಮನ್ ಬೇಕಾಗಿದ್ದಾನೆ. ಆಸೀಸ್ನಧ ಹೋಬಾರ್ಡ್ ಪ್ರದೇಶ ಸುಂದರ ತಾಣವಾಗಿದ್ದು, ನೀನು ಹೋಬಾರ್ಟ್ ಹರಿಕೇನ್ಸ್ ತಂಡದ ಪರ ಆಡಬಹುದು. ಆಸ್ಟ್ರೇಲಿಯದಲ್ಲೇ ರಜೆ ದಿನಗಳನ್ನು ಮಜಾ ಮಾಡು. ಆಸ್ಟ್ರೇಲಿಯಾದ ಅದ್ಭುತವಾದ ಜಾಗಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಊಟಕ್ಕೆ ನಮ್ಮ ಮನೆಗೆ ಬಂದು ಬಿಡು. ನಾನು ನನ್ನ ಹೆಂಡತಿ ಫಿಲ್ಮ್ ನೋಡಲು ಹೊರಗಡೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡಿಕೊಂಡು ಇರು” ಎಂಬುದಾಗಿ ಸ್ಲೆಡ್ಜಿಂಗ್ ಮಾಡಿದ್ದರು.
ನಂತರ ಟಿಮ್ ಪೇಯ್ನ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ “ಮಗೆ ಇವತ್ತು ಒಬ್ಬ ವಿಶೇಷ ಅತಿಥಿ ಸಿಕ್ಕಿದ್ದಾನೆ.. ಕಮಾನ್ ಮಾಂಕಿ(ಮಯಾಂಕ್ ಅಗರ್ವಾಲ್) ನಮಗೆ ವಿಶೇಷ ಅತಿಥಿ ಸಿಕ್ಕಿದ್ದಾನೆ. ನೀನು ಯಾವತ್ತಾದರೂ ತಾತ್ಕಾಲಿಕ ನಾಯಕನ ಬಗ್ಗೆ ಕೇಳಿದ್ದೀಯಾ? ಆತನನ್ನು ನಾನು ಈಗ ನೋಡುತ್ತಿದ್ದೇನೆ. ಆತನನ್ನು ಔಟ್ ಮಾಡಲು ನೀನೇನೂ ಮಾಡಬೇಕಿಲ್ಲ. ಆತ ಮಾತನಾಡುವುದನ್ನು ಇಷ್ಟ ಪಡುತ್ತಾನೆ. ಆತನಿಗೆ ಸಾಧ್ಯವಿರುವುದು ಅದೊಂದೇ. ಮಾತನಾಡುವುದನ್ನು ಹೊರತು ಪಡಿಸಿದರೆ ಆತನ ಕೈಯಲ್ಲಿ ಏನೂ ಸಾಧ್ಯವಿಲ್ಲ” ಎಂದು ರಿಷಭ್ ಪಂತ್ ತಿರುಗೇಟು ನೀಡಿದ್ದರು.
ಇದಾದ ಎರಡು ದಿನಗಳಲ್ಲಿ ರಿಷಭ್ ಪಂತ್, ಟಿಮ್ ಪೇಯ್ನ್ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಉಭಯ ತಂಡಗಳ ಭೋಜನ ಕೂಟವೊಂದರಲ್ಲಿ ಟಿಮ್ ಪೇಯ್ನ್ ಅವರ ಮಕ್ಕಳನ್ನು ರಿಷಭ್ ಪಂತ್ ಎತ್ತಿ ಮುದ್ದಾಡಿದ್ದಾರೆ. ಈ ಚಿತ್ರಗಳನ್ನು ಐಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಅಲ್ಲದೆ ಟಿಮ್ ಪೇಯ್ನ್ ಅವರ ಸವಾಲನ್ನು ರಿಷಭ್ ಪಂತ್ ಸ್ವೀಕರಿಸಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಹಾಸ್ಯ ಧಾಟಿಯಲ್ಲಿ ಬರೆಯಲಾಗಿದೆ.

LEAVE A REPLY

Please enter your comment!
Please enter your name here

nineteen + 11 =