ಸಿಡ್ನಿ ಬೀದಿಯಲ್ಲಿ ವಿರುಷ್ಕಾ ಹೊಸ ವರ್ಷದ ಮೊದಲ ಸೆಲ್ಫಿ..!

0
PC: Virat Kohli/Twitter

ಸಿಡ್ನಿ, ಡಿಸೆಂಬರ್ 31: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಸಿಡ್ನಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ.

ಭಾರತದ ಕಾಲಮಾನಕ್ಕಿಂತ ಐದೂವರೆ ಗಂಟೆ ಮೊದಲೇ ಆಸ್ಟ್ರೇಲಿಯಾದಲ್ಲಿ ವಿರುಷ್ಕಾ ದಂಪತಿ 2019ನ್ನು ಸ್ವಾಗತಿಸಿದರು. ಸಿಡ್ನಿ ಬೀದಿಯಲ್ಲಿ ಇಬ್ಬರೂ ಹೊಸ ವರ್ಷದ ಮೊದಲ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಈ ಚಿತ್ರಗಳನ್ನು ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದ್ದು, ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.

LEAVE A REPLY

Please enter your comment!
Please enter your name here

5 × four =