ಸಿಡ್ನಿ FC ವಿರುದ್ಧ ಸೌಹಾರ್ದ ಪಂದ್ಯ ಆಡಲಿರುವ ಭಾರತ ಫುಟ್ಬಾಲ್ ತಂಡ

0
India football team coach Stephen Constantine with the Indian team. PC: AIFF

ಹೊಸದಿಲ್ಲಿ : ಭಾರತ ಫುಟ್ಬಾಲ್ ತಂಡ ಎ-ಲೀಗ್ ಚಾಂಪಿಯನ್ಸ್ ಸಿಡ್ನಿ FC ತಂಡದ ವಿರುದ್ಧ ಆಗಸ್ಟ್ 28ರಂದು ಸಿಡ್ನಿಯಲ್ಲಿ ಸೌಹಾರ್ದ ಪಂದ್ಯವಾಡಲಿದೆ. ಸದ್ಯ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಎಪಿಐಎ ಲೀಚಾರ್ಡ್ ಟೈಗರ್ಸ್ FC ಮತ್ತು ರೈಡಲ್‌ಮೇರ್ ಲಯನ್ಸ್ FC ತಂಡಗಳ ವಿರುದ್ದ ಕ್ರಮವಾಗಿ ಆಗಸ್ಟ್ 25 ಹಾಗೂ 31ರಂದು ಪಂದ್ಯವನ್ನಾಡಲಿದೆ.
ಪೂರ್ಣ ಬಲದ ಸಿಡ್ನಿ FC ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ ಎಂದು ತಂಡದ ಪ್ರಧಾನ ಕೋಚ್ ಕಾನ್‌ಸ್ಟಂಟೈನ್ ಹೇಳಿದ್ದಾರೆ. ”ಸಿಡ್ನಿ FC ತಂಡ ಎ-ಲೀಗ್ ಪ್ರೀಮಿಯರ್ಸ್ ಚಾಂಪಿಯನ್ ತಂಡ ಮತ್ತು 3 ವರ್ಷಗಳಿಂದ ಅತ್ಯುತ್ತಮ ಆಟವಾಡುತ್ತಿದೆ. ನಮಗೆ ಇದು ದೊಡ್ಡ ಪರೀಕ್ಷೆಯಾಗಿದ್ದು, ನಾವು ಅದಕ್ಕೆ ರೆಡಿ ಇದ್ದೇವೆ, ’’ ಎಂದಿದ್ದಾರೆ.

ವೇಳಾಪಟ್ಟಿ
ಆಗಸ್ಟ್ 25: ಭಾರತ – ಎಪಿಐಎ ಲೀಚಾರ್ಡ್ ಟೈಗರ್ಸ್ FC (ರಾತ್ರಿ 8ಕ್ಕೆ)
ಆಗಸ್ಟ್ 28; ಭಾರತ – ಸಿಡ್ನಿ FC (ಮಧ್ಯಾಹ್ನ 3.30ಕ್ಕೆ)
ಆಗಸ್ಟ್ 31: ಭಾರತ – ರೈಡಲ್‌ಮೇರ್ ಲಯನ್ಸ್ FC (ರಾತ್ರಿ 9.30ಕ್ಕೆ)

LEAVE A REPLY

Please enter your comment!
Please enter your name here

fifteen − twelve =